Connect with us

KARNATAKA

ಪ್ರಪಾತದ ಬಳಿ ಬಸ್ ಪಲ್ಟಿ – ಪ್ರಾಣಾಪಾಯದಿಂದ 25 ಪ್ರಯಾಣಿಕರು ಪಾರು

ಕಾರವಾರ, ಜೂನ್ 25: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಲಾರಿಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ದೊಡ್ಡ ದುರ್ಘಟನೆಯಿಂದ ಪಾರಾದ ಘಟನೆ ಉತ್ತರ ಕನ್ನಡ  ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಬೆಂಗಳೂರಿನಿಂದ 25 ಪ್ರಯಾಣಿಕರನ್ನು ಗೋವಾದ ಕಡೆ ಕರೆದೊಯ್ಯುತ್ತಿದ್ದ ಬಸ್ ಅರೆಬೈಲ್ ಘಟ್ಟದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಲಾರಿಗೆ ಗುದ್ದಿ ಪಲ್ಟಿಯಾಗಿದೆ. ಈ ವೇಳೆ ಬಸ್ ಪ್ರಪಾತಕ್ಕೆ ಬೀಳದೆ ಅರ್ಧದಲ್ಲೇ ನಿಂತಿದ್ದು, 25 ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿದೆ ಬಚಾವ್ ಆಗಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿ.ಟಿಯಲ್ಲಿದ್ದ ಹೊಸಪೇಟೆಯ ಗಾದಿಗನೂರಿನ ಕುರುಬರ ಕೋರಿ ನವೀನ್ ಕುಮಾರ, ಕೆ.ಬಿ.ಗಾದೇಶ, ಕೆ.ಶ್ರೀಕಾಂತ, ಕುಮಾರ ಕೊರವರ್, ಕೆ.ಗಾದಿಲಿಂಗ, ಕೆ.ಪ್ರಜ್ವಲ್, ಕೋರಿ ಮಹೇಶ, ಕೆ. ಎರಿಸ್ವಾಮಿ, ಕಾಗಿ ಸಿದ್ದರಾಮ, ಸಂಡೂರಿನ ರಾಜು ಎರಿಸ್ವಾಮಿ, ಕುರುಗೋಡಿನ ಕಾರ್ತಿಕ, ಕೆ.ಎಂ.ನಾಗರಾಜ, ಕೊಳಗಲ್ಲಿನ ಯು.ಸಾಗರ ಎಂಬವರು ಗಾಯಗೊಂಡಿದ್ದಾರೆ.

ಗಾಯಾಳುಗಳೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಯಲ್ಲಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *