LATEST NEWS
ಉಡುಪಿ – ಡ್ರೈವಿಂಗ್ ವೇಳೆ ಖಾಸಗಿ ಬಸ್ ಚಾಲಕನಿಗೆ ಎದೆನೋವು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಉಡುಪಿ ಫೆಬ್ರವರಿ 12: ಬಸ್ ಚಾಲಕನಿಗೆ ಡ್ರೈವಿಂಗ್ ವೇಳೆ ಹಠಾತ್ ಎದೆ ನೋವು ಕಾಣಿಸಿಕೊಂಡ ಪರಿಣಾಮ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗೆ ಇಳಿದು ನಿಂತ ಘಟನೆ ಸಂಭವಿಸಿದೆ.
ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ಎಕ್ಸ್ ಪ್ರೇಸ್ ಬಸ್ ನ ಚಾಲಕ ಶಂಭು ಎಂಬವರಿಗೆ ಎದೆನೋವು ಕಾಣಿಸಿಕೊಂಡಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಸೀದಾ ರಸ್ತೆ ಬದಿಯ ಇಳಿಜಾರಿಗೆ ಇಳಿದು ನಿಂತಿದೆ. ಕೂಡಲೇ ಬಸ್ ಚಾಲಕ ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ರಸ್ತೆ ಬದಿ ಹೋದ ಕಾರಣ ದೊಡ್ಡ ಅಪಘಾತವೊಂದು ತಪ್ಪಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)