Connect with us

    BELTHANGADI

    ಮದುವೆಗೆ ಹೊರಟ ಬಸ್​ ಪಲ್ಟಿ: 15ಕ್ಕೂ ಅಧಿಕ ಜನರಿಗೆ ಗಾಯ

    ಬೆಳ್ತಂಗಡಿ, ಎಪ್ರಿಲ್ 04: ಮದುವೆ ಸಮಾರಂಭಕ್ಕೆ ಹೊರಡಿದ್ದ ಬಸ್​ ಪಲ್ಟಿಯಾಗಿ 15ಕ್ಕಿಂತ ಅಧಿಕ ಜನರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ‌ ಬೂಡುಜಾಲ್ ಸಮೀಪ ಸಂಭವಿಸಿದೆ.

    ಮದುವೆಗೆಂದು ಬಸ್​ ಮೈಸೂರಿನಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ನಿಡ್ಲೆ ಗ್ರಾಮದ‌ ಬೂಡುಜಾಲ್ ಸಮೀಪದ ಶಾಂತಿನಗರ ಬಸ್ ಸ್ಟಾಂಡ್ ಬಳಿ ಅವಘಡ ನಡೆದಿದೆ.

    ಬಸ್​​​ನಲ್ಲಿದ್ದ 15ಕ್ಕಿಂತಲೂ ಅಧಿಕ ಮಂದಿಗೆ ಗಾಯವಾಗಿದ್ದು, ಒರ್ವರ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರೆಲ್ಲ ಸೇರಿ ಗಾಯಾಳುಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ಸಹಕರಿಸಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply