
ಉತ್ತರಪ್ರದೇಶ ಜನವರಿ 11: ಬ್ಯಾಂಕ್ ಒಂದಕ್ಕೆ ಗೂಳಿಯೊಂದು ಎಂಟ್ರಿ ಕೊಟ್ಟ ಘಟನೆ ಉತ್ತರಪ್ರದೇಶದ ಶಹಗಂಜ್ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಿಧ ರೀತಿಯ ಕಮೆಂಟ್ ಗಳು ಬಂದಿದೆ.

ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೆ ಕುಳಿತಿದ್ದರು. ಈ ವೇಳೆ ಗೂಳಿಯೊಂದು ಬ್ಯಾಂಕ್ ಒಳಗೆ ಬಂದಿದ್ದರಿಂದ ಸಿಬ್ಬಂದಿ ಕೆಲಕ್ಷಣ ಗಾಬರಿಯಾಗಿದ್ದರು. ಗೂಳಿ ಕಚೇರಿಯಲ್ಲಿ ಯಾವುದೇ ಅವಾಂತರ ಮಾಡದೇ ಅಲ್ಲಿಂದ ತೆರಳಿತು ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ನಮ್ಮ ಸಿಬ್ಬಂದಿ ಊಟ ಮಾಡುತ್ತಿದ್ದರಿಂದ ಬಾಗಿಲು ಬಳಿ ಯಾರೂ ಇರಲಿಲ್ಲ, ಊಟದ ಸಮಯವಾದ್ದರಿಂದ ಗ್ರಾಹಕರು ಇರಲಿಲ್ಲ, ಈ ವೇಳೆ ಗೂಳಿ ನೇರವಾಗಿ ಬ್ಯಾಂಕ್ ಒಳಗೆ ಬಂದು ಕೆಲವೊತ್ತು ನಿಂತಲ್ಲೇ ನಿಂತಿತ್ತು. ನಂತರ ಭದ್ರತಾ ಸಿಬ್ಬಂದಿ ರೈಫಲ್ ಹಾಗೂ ಕೋಲು ಹಿಡಿದು ಗೂಳಿಯನ್ನು ಓಡಿಸಿದರು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.
ಗೂಳಿ ಸಾಲ ಕೇಳಲು ಬ್ಯಾಂಕಿಗೆ ಬಂದಿದೆ! ಆಧಾರ್ ಕಾರ್ಡ್, ಪಾನ್ ಕಾರ್ಡ್ ಇಲ್ಲದ್ದಕ್ಕೆ ಸಿಬ್ಬಂದಿ ಸಾಲ ಕೊಡದೇ ವಾಪಸ್ ಕಳಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಊಟದ ಸಮಯದಲ್ಲಿ ಬ್ಯಾಂಕ್‌ಗೆ ಯಾಕೆ ಹೋದೆ? ಎಂದು ಗೂಳಿಯನ್ನೇ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೊಗೆ ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.





