LATEST NEWS
ಬ್ರಹ್ಮಾವರ – ಗೂಳಿ ರಾದ್ದಾಂತಕ್ಕೆ ಪ್ರಾಣ ಕಳೆದುಕೊಂಡ ಮಹಿಳೆ…ಇಬ್ಬರು ಗಂಭೀರ
ಬ್ರಹ್ಮಾವರ ಸೆಪ್ಟೆಂಬರ್ 10: ಬ್ರಹ್ಮಾವರದಲ್ಲಿ ಗೂಳಿಯೊಂದರ ರಾದ್ದಾಂತದಿಂದ ಓರ್ವ ಮಹಿಳೆ ಮೃತ ಪಟ್ಟಿದ್ದು ಇಬ್ಬರು ಮಹಿಳೆ ತೀರಾ ಗಂಭಿರ ಸ್ಥಿತಿಯಲ್ಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಬೃಹತ್ ಗಾತ್ರದ ಗೂಳಿ ನಗರವೆಲ್ಲಾ ಸಂಚರಿಸಿ ಇಲ್ಲಿನ ಹಣ್ಣು ,ತರಕಾರಿ ಅಂಗಡಿಗೆ ನುಗ್ಗಿ ಹೊಟ್ಟೆ ತುಂಬುವಷ್ಟು ತಿಂದು , ರಸ್ತೆ ಬದಿಯಲ್ಲಿ ನಿಲ್ಲಿಸಿದ ದ್ವಿಚಕ್ರ ಕಾರು ಇನ್ನಿತರ ವಾಹನ ಜಖಂ ಮಾಡಿದೆ.
ಬ್ರಹ್ಮಾವರದ ಇಂದಿರಾನಗರದ ನಿವಾಸಿ 71 ವರ್ಷದ ವಿಮಲ ನಾಯಕ್ ರನ್ನು ಇದೇ ಗೂಳಿ ಕೆಡವಿ ಹಾಕಿದ್ದು, ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ರೂ ಖರ್ಚು ಮಾಡಿದರೂ ಫಲಕಾರಿಯಾಗದೆ ಅಗಸ್ಟ 29 ರಂದು ಮೃತರಾದರು. ಇನ್ನು ರಥ ಬೀದಿಯ ಬಳಿ ವಾಸ ಮಾಡುವ ಗೌರಿ ನಾಯಕರ ಮನೆಗೆ ನುಗ್ಗಿದ ಗೂಳಿ ಅವರನ್ನು ಕೆಡವಿದ್ದು ಹಲವು ದಿನ ಕೋಮಾ ಸ್ಥಿತಿಯಲ್ಲಿದ್ದರು. ಕೂಲಿ ಕೆಲಸ ಮಾಡಿ ಬದುಕುವ ಅವರ ಮಗ ಶಿವಾನಂದ ಲಕ್ಷಾಂತರ ರೂ ಸಾಲ ಮಾಡಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೆ ಇದೀಗ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಗೌರಿ ಬಾಯಿ.
ಇನ್ನೊಬ್ಬರು ಇಂದಿರಾನಗರದ ಬಿಲ್ಲಿ ಬಾಯಿ ಎನ್ನುವ ಮಹಿಳೆ, ಇವರು ಕೂಡಾ ಗೂಳಿಯ ಏಟು ತಿಂದು ಮನೆಯಲ್ಲಿ ನಡೆದಾಡದ ಸ್ಥಿತಿಯಲ್ಲಿದ್ದಾರೆ.
ಕೆಲವು ಸಮಯದ ಹಿಂದೆ ಇಲ್ಲಿನ ಯುವಕರು ಗೂಳಿಯನ್ನು ಹಿಡಿದು ಎರಡು ತಿಂಗಳು ಕಟ್ಟಿ ಸಾಕಿ ಪುನ ಬಿಡುಗಡೆಗೊಳಿಸಿದ ಬಳಿಕ ಬ್ರಹ್ಮಾವರ ರಥ ಬೀದಿ ಬಿಟ್ಟು ,ಇಂದಿರಾ ನಗರಕ್ಕೆ ಲಗ್ಗೆ ಇಟ್ಟು ಜನರಿಗೆ ತೊಂದರೆ ಕೊಡಲು ಆರಂಭಿಸಿದೆ, ಎಂದು ಸ್ಥಳೀಯರು ದೂರಿದ್ದಾರೆ.