DAKSHINA KANNADA
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಕ್ಕೆ ಸುಬ್ರಹ್ಮಣ್ಯ ಭೇಟಿ – ತುಲಾಭಾರ ಸೇವೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಕುಕ್ಕೆ ಸುಬ್ರಹ್ಮಣ್ಯ ಜೂನ್ 24: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕರಾವಳಿಯಲ್ಲಿ ಟೆಂಪಲ್ ರನ್ ನಲ್ಲಿದ್ದು, ಧರ್ಮಸ್ಥಳದ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.
ದೇವಾಲಯದ ಅರ್ಚಕರಾದ ಸತ್ಯನಾರಾಯಣ ನೂರಿತಾಯ ಅವರು ತುಲಾಭಾರ ಸೇವೆಯನ್ನು ನೆರವೇರಿಸಿದರು. ಬೆಳಿಗ್ಗೆ ಇಲ್ಲಿಗೆ ಬಂದ ಯಡಿಯೂರಪ್ಪ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಸ್ವಾಗತಿಸಿದರು. ಮಾಜಿ ಸಚಿವ ಅಂಗಾರ, ಮೋಹನ್ ರಾಮ ಸುಳ್ಳಿ ಹಾಗೂ ದೇವಳ ಸಮಿತಿಯವರು ಇದ್ದರು. ಮಧ್ಯಾಹ್ನ ಸುಳ್ಯಕ್ಕೆ ತೆರಳುವ ಯಡಿಯೂರಪ್ಪ, ಸುಳ್ಯದ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
You must be logged in to post a comment Login