LATEST NEWS
ಜಮ್ಮು ಬಾರ್ಡರ್ ಪೋಸ್ಟ್‌ನಲ್ಲಿ ಗುಂಡು ಹಾರಿಸಿಕೊಂಡು BSF ಅಧಿಕಾರಿ ಸಾವು.

ಜಮ್ಮು, ಜುಲೈ 25: ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿನ ಪೋಸ್ಟ್‌ನಲ್ಲಿ ಗಡಿ ಭದ್ರತಾ ಪಡೆ (BSF) ಸಬ್ ಇನ್‌ಸ್ಪೆಕ್ಟರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 6.35 ರ ಸುಮಾರಿಗೆ ಕಿರಿಯ ಶ್ರೇಣಿಯ ಸೈನಿಕನೊಬ್ಬ ತನ್ನ ಕೋಣೆಗೆ ಹೋದಾಗ ರಾಮ್‌ದೇವ್ ಸಿಂಗ್ ಸತ್ತು ಬಿದ್ದಿರುವುದು ಕಂಡುಬಂದಿದೆ. ಅದೇ ಸ್ಥಳದಲ್ಲಿ ಆತ್ಮಹತ್ಯೆಗೆ ಬಳಸಿದ ಆಯುಧ ಪತ್ತೆಯಾಗಿದೆ.

ಅರಾಮ್‌ದೇವ್ ಸಿಂಗ್ ರಾಜಸ್ಥಾನದ ಸಿಕರ್ ಜಿಲ್ಲೆಯವರು. ಇವರು 12 ನೇ ಬೆಟಾಲಿಯನ್‌ಗೆ ಸೇರಿದವರು ಮತ್ತು ಬಿಎಸ್‌ಎಫ್‌ನ ತುಕಡಿಗೆ ಕಮಾಂಡರ್ ಆಗಿದ್ದರು. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.