LATEST NEWS
ಶಂಕಿತ ಡೆಂಗ್ಯೂಗೆ ವಿಧ್ಯಾರ್ಥಿನಿ ಬಲಿ ಜಿಲ್ಲೆಯಲ್ಲಿ ಮುಂದುವರೆದೆ ಡೆಂಗ್ಯೂ ಹಾವಳಿ
ಶಂಕಿತ ಡೆಂಗ್ಯೂಗೆ ವಿಧ್ಯಾರ್ಥಿನಿ ಬಲಿ ಜಿಲ್ಲೆಯಲ್ಲಿ ಮುಂದುವರೆದೆ ಡೆಂಗ್ಯೂ ಹಾವಳಿ
ಮಂಗಳೂರು ಅಗಸ್ಟ್ 24:ಮಾರಕ ಡೆಂಗ್ಯೂ ಮತ್ತೊಂದು ಜೀವ ಬಲಿ ಪಡೆದಿದೆ. ಮಂಗಳೂರ ನಗರದ ಅಲೋಶಿಯಸ್ ಕಾಲೇಜಿನ ಬಿಎಸ್ ಸಿ ವಿಧ್ಯಾರ್ಥಿನಿ ಮಧುಶ್ರೀ ಶೆಟ್ಟಿ (19) ಎಂದು ಗುರುತಿಸಲಾಗಿದೆ.
ಈಕೆ ಮೂಲತ ಬಂಟ್ವಾಳದ ಸಾಲೆತ್ತೂರು ನಿವಾಸಿಯಾಗಿದ್ದಾಳೆ. ಡೆಂಗ್ಯೂ ಜ್ವರಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೂರು ದಿನ ಹಿಂದಷ್ಟೇ ಬಿಡುಗಡೆ ಆಗಿದ್ದರು.
ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಆಕೆಗೆ ತಡರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ. ಆದರೆ ವೈದ್ಯರ ಪ್ರಕಾರ ಮಧುಶ್ರೀ ಸಾವಿಗೆ ಡೆಂಗ್ಯೂ ಕಾರಣವಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮಮುಖಳಾಗಿ ವಿದ್ಯಾರ್ಥಿನಿ ಮನೆಗೆ ಹೋಗಿದ್ದಳು. ಬಳಿಕ ಎದೆ ನೋವು ಹಾಗೂ ಶ್ವಾಸಕೋಶದ ಸೋಂಕು ಅವಳಿ ಭಾಧಿಸಿದ್ದು ಅದರಿಂದ ಆಕೆ ಸಾವನ್ನಪ್ಪಿರಬಹುದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತ ಡೆಂಗ್ಯೂ ನಿಯಂತ್ರಣಕ್ಕೆ ನಿರಂತರ ಹೋರಾಟ ನಡೆಸುತ್ತಿದ್ದರೂ ಡೆಂಗ್ಯೂ ಮಾತ್ರ ನಿಯಂತ್ರಣಕ್ಕೆ ಭಾರದೇ ತನ್ನ ಬಲಿಯನ್ನು ಮುಂದುವರೆಸಿದೆ. ಒಂದು ಮಾಹಿತ ಪ್ರಕಾರ ಈಗಾಗಲೇ ಶಂಕಿತ ಡೆಂಗ್ಯೂ ಜ್ವರ 11 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.