Connect with us

LATEST NEWS

ಪಡೀಲ್ ಬಳಿ ರೈಲ್ವೆ ಹಳಿ ಮೇಲೆ ಭೂ ಕುಸಿತ ಮುಂಬೈ ರಲು ಸಂಚಾರದಲ್ಲಿ ವ್ಯತ್ಯಯ

ಪಡೀಲ್ ಬಳಿ ರೈಲ್ವೆ ಹಳಿ ಮೇಲೆ ಭೂ ಕುಸಿತ ಮುಂಬೈ ರಲು ಸಂಚಾರದಲ್ಲಿ ವ್ಯತ್ಯಯ

ಮಂಗಳೂರು ಅಗಸ್ಟ್ 24: ನಗರದ ಹೊರವಲಯದ ಪಡೀಲ್‌– ಕುಲಶೇಖರದ ನಡುವೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.

ಪಾಲಕ್ಕಾಡ್‌ ರೈಲ್ವೆ ವಿಭಾಗದ ವ್ಯಾಪ್ತಿಯ ಮಂಗಳೂರು ಜಂಕ್ಷನ್‌– ತೋಕೂರು ಸೆಕ್ಷನ್‌ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಭಾರಿ ಪ್ರಮಾಣದ ಮಣ್ಣು, ಕಲ್ಲು ಬಂಡೆಗಳು ಹಳಿ ಮೇಲೆ ಬಿದ್ದಿವೆ. 100 ಮೀಟರ್‌ಗೂ ಹೆಚ್ಚು ಉದ್ದದವರೆಗೆ ರೈಲು ಹಳಿ ಮಣ್ಣಿನಲ್ಲಿ ಮುಚ್ಚಿಹೋಗಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬೆಳಿಗ್ಗೆಯಿಂದಲೇ ರೈಲು ಸಂಚಾರ ಸ್ಥಗಿತವಾಗಿದೆ. ಮಂಗಳೂರು ಜಂಕ್ಷನ್‌– ಸುರತ್ಕಲ್‌ ನಡುವಣ ರೈಲು ಮಾರ್ಗ ಬಂದ್‌ ಆಗಿದೆ. ಕುಸಿದ ಮಣ್ಣು ತೆರವು ಮತ್ತು ಹಳಿ ರಿಪೇರಿ ಕಾರ್ಯಕ್ಕೆ 3 ದಿನದ ಅಗತ್ಯವಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ದುರಸ್ಥಿ ಪೂರ್ಣಗೊಳ್ಳುವವರೆಗೆ ಮಂಗಳೂರು ಮುಂಬೈ ನಡುವೆ ಸಂಚರಿಸುವ ರೈಲುಗಳು ಸುರತ್ಕಲ್ ನಿಲ್ದಾಣದಿಂದಲೇ ಕಾರ್ಯಾಚರಿಸಲಿದೆ ಎಂದು ಕೊಂಕಣ ರೈಲ್ವೆ ಪಿಆರ್ ಓ ಸುಧಾ ಕೃಷ್ಣ ಮೂರ್ತಿ ತಿಳಿಸಿದ್ದಾರೆ.

ಶನಿವಾರ ತಿರುವನಂತಪುರ– ನಿಝಾಮುದ್ದೀನ್‌ ಎಕ್ಸ್‌ಪ್ರೆಸ್‌ ಮತ್ತು ಓಖಾ– ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪಾಲಕ್ಕಾಡ್‌ ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.

ಮಾರ್ಗ ಬದಲಾವಣೆ: ತಿರುವನಂತಪುರ– ಹಝರತ್‌ ನಿಝಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ ಮತ್ತು ಕೂಚುವೆಲಿ– ಇಂದೋರ್‌ ಎಕ್ಸ್‌ಪ್ರೆಸ್‌ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ರೈಲುಗಳು ಶೋರನೂರು, ಪೋಡನೂರು, ಈರೋಡ್‌, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ ಮಾರ್ಗವಾಗಿ ಸಂಚರಿಸುತ್ತಿವೆ.

ತಿರುವನಂತಪುರ– ಲೋಕಮಾನ್ಯ ತಿಲಕ್‌ ನಡುವಿನ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಎರ್ನಾಕುಲಂ ಜಂಕ್ಷನ್‌ನಲ್ಲಿ ನಿಂತಿದೆ. ಅದು ಅಲ್ಲಿಂದ ಲೋಕಮಾನ್ಯ ತಿಲಕ್‌ವರೆಗೆ ಸಂಚರಿಸುವುದಿಲ್ಲ. ನಾಗರಕೋಯಿಲ್‌– ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್‌ ನಡುವಣ ಎಕ್ಸ್‌ಪ್ರೆಸ್ ರೈಲು ದಿಂಡಿಗಲ್‌ವರೆಗೆ ಮಾತ್ರ ಸಂಚರಿಸಲಿದೆ. ದಿಂಡಿಗಲ್‌ನಿಂದ ಛತ್ರಪತಿ ಶಿವಾಜಿ ಟರ್ಮಿನಲ್‌ವರೆಗಿನ ಸಂಚಾರ ರದ್ದುಗೊಳಿಸಲಾಗಿದೆ. ಈ ಮಧ್ಯೆ ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದಲ್ಲೂ ಇದೇ 25 ರವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

Facebook Comments

comments