Connect with us

    DAKSHINA KANNADA

    ರಾಷ್ಟ್ರೀಯ ಹೆದ್ದಾರಿ 66 ರ ಕೆ.ಸಿ.ರೋಡ್ ನಲ್ಲೊಂದು ಅಪಾಯಕಾರಿ ಸೇತುವೆ, ಶ್ರೀಘ್ರ ದುರಸ್ತಿಗೆ ಸಾರ್ವಜನಿಕರ ಕರೆ…

    ರಾಷ್ಟ್ರೀಯ ಹೆದ್ದಾರಿ 66 ರ ಕೆ.ಸಿ.ರೋಡ್ ನಲ್ಲೊಂದು ಅಪಾಯಕಾರಿ ಸೇತುವೆ, ಶ್ರೀಘ್ರ ದುರಸ್ತಿಗೆ ಸಾರ್ವಜನಿಕರ ಕರೆ…

    ಮಂಗಳೂರು, ಸೆಪ್ಟಂಬರ್ 1: ಪಣಜಿ- ಕೊಚ್ಚಿ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಹೊರವಲಯದ ಕೆ.ಸಿ.ರೋಡ್ ಎಂಬಲ್ಲಿರುವ ಸೇತುವೆಯೊಂದು ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ.

    ಇತ್ತೀಚೆಗೆ ಈ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ತಡೆಗೋಡೆಯು ಸಂಪೂರ್ಣ ಹಾನಿಗೊಳಗಾಗಿದೆ.

    ಇದರಿಂದಾಗಿ ತಡೆಗೋಡೆ ಇಲ್ಲದ ಪರಿಣಾಮ ಹಾಗೂ ಅತ್ಯಂತ ಇಕ್ಕಟ್ಟಾಗಿರುವ ಸೇತುವೆಯಿಂದಾಗಿ ಇದರ ಮೇಲೆ ಸಂಚರಿಸುವ ವಾಹನಗಳಿಗೆ ಅಪಾಯ ಎದುರಾಗಿದೆ.

    ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಸೇತುವೆಯ ಮೂಲಕವೇ ಹಾದು ಹೋಗುತ್ತಿದ್ದು, ಸೇತುವೆಯನ್ನು ಕೂಡಲೇ ದುರಸ್ತಿ ಮಾಡದೇ ಹೋದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗುಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಸ್ಥಳೀಯ ಜನರೂ ಈ ತಮ್ಮ ದಿನನಿತ್ಯದ ಉಪಯೋಗಕ್ಕಾಗಿ ಈ ಸೇತುವೆಯನ್ನೇ ಬಳಸುತ್ತಿದ್ದು, ತಡೆಗೋಡೆ ಮುರಿದ ಸೇತುವೆಯ ಮೇಲೆ ಪ್ರಾಣಭಯದಿಂದ ಸಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

    ಸೇತುವೆಯ ದುಸ್ತಿತಿಯ ಕಾರಣದಿಂದಾಗಿ ಇದೀಗ ಸೇತುವೆಯ ಮೇಲೆ ಅಡ್ಡಲಾಗಿ ಬ್ಯಾರಿಕೇಡ್ ಅನ್ನೂ ಅಳವಡಿಸಲಾಗಿದೆ.

    ಆದರೆ ಈ ಬ್ಯಾರಿಕೇಡ್ ಗಳು ರಾತ್ರಿ ಸಂದರ್ಭದಲ್ಲಿ ವಾಹನ ಚಾಲಕರ ಗಮನಕ್ಕೆ ಬರದೇ ಇರುವುದರಿಂದ ಈ ಬ್ಯಾರಿಕೇಡ್ ಗಳೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ

    . ಅಲ್ಲದೆ ಈ ಸೇತುವೆಯಲ್ಲಿ ಏಕಮುಖ ಚಾಲನೆಗೆ ಅವಕಾಶವಿದ್ದರೂ, ಕೆಲವು ವಾಹನಗಳು ಈ ಸೇತುವೆಯ ಮೂಲಕ ವಿರುದ್ಧ ದಿಕ್ಕಿನಲ್ಲೂ ಬರುತ್ತಿರುವುದು ಅವಘಡಕ್ಕೆ ಕಾರಣವಾಗುತ್ತಿದೆ.

    ಸೇತುವೆಯ ದುಸ್ತಿತಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು,ನ ಕೂಡಲೇ ದುರಸ್ತಿ ಮಾಡುವಂತೆ ಸಾರ್ವಜನಿಕರು ಮನವಿಯನ್ನೂ ಮಾಡಿದ್ದಾರೆ.

    ದುರಸ್ತಿ ಕಾಮಗಾರಿಯು ವಿಳಂಬವಾದಷ್ಟು ಈ ಸೇತುವೆಯೂ ಹೆಚ್ಚು ಅಪಾಯಕಾರಿಯಾಗಲಿದೆ ಎನ್ನುವ ಎಚ್ಚರಿಕೆಯನ್ನೂ ಸ್ಥಳೀಯ ಗ್ರಾಮಸ್ಥರು ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply