Connect with us

    FILM

    ತನ್ನಿಷ್ಟದ ಹಾಡು ಹಾಕಿಲ್ಲ ಎಂದು ಮದುವೆಮನೆಗೆ ಪ್ರವೇಶಿಸಲು ನಿರಾಕರಿಸಿದ ವಧು

    ಮದುವೆ ಮನೆಗೆ ವಧು ಎಂಟ್ರಿ ಕೊಡುವ ಸಂದರ್ಭ ತಾನು ಹೇಳಿದ ಹಾಡು ಹಾಕಿಲ್ಲ ಎಂದು ಮದುವೆ ಮನೆ ಪ್ರವೇಶಕ್ಕೆ ನಿರಾಕರಿಸಿದ ಘಟನೆ ನಡೆದಿದ್ದು, ಈ ಸಂದರ್ಭ ಮದುಮಗಳ ಸಿಟ್ಟಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಈ ಘಟನೆಯ ವಿಡಿಯೋ ತುಣುಕು ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋಗ್ರಫಿ ಪೇಜ್‍ನಿಂದ “ದಿ ವೆಡ್ಡಿಂಗ್‍ಬ್ರಿಗೇಡ್” ಹೆಸರಿನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ.

    ಮದುಮಗಳು ಮದುವೆ ಮನೆಗೆ ಎಂಟ್ರಿಕೊಡುವ ಸಂದರ್ಭದ ವಿಡಿಯೋ ಇದಾಗಿದ್ದು, ತನ್ನ ಕುಟುಂಬದವರ ಜೊತೆ ಹಾಲ್ ಗೆ ಎಂಟ್ರಿ ಇನ್ನೇನು ಕೊಡಬೇಕು ಅನ್ನುವಾಗಲೇ ಇದ್ದಕ್ಕಿಂದತೆ ಮುಂದೆ ಚಲಿಸಲು ನಿರಾಕರಿಸುತ್ತಾಳೆ. ಯಾಕಂದರೆ ಕೆ ತಾನು ಸೆಲೆಕ್ಟ್ ಮಾಡಿಟ್ಟ ಹಾಡನ್ನು ಅಲ್ಲಿ ಪ್ಲೇ ಮಾಡಲಿಲ್ಲ. ಇದರಿಂದ ಸಿಟ್ಟಿಗೆದ್ದ ವಧು, ನಾನು ಆಯ್ಕೆ ಮಾಡಿರುವ ಹಾಡನ್ನು ಪ್ಲೇ ಮಾಡುವವರೆಗೂ ನಾನು ಹಾಲ್ ಗೆ ತೆರಳಲ್ಲಿ ಎಂದು ಹಠ ಹಿಡಿಯುತ್ತಾಳೆ. ಅಲ್ಲದೆ ತಾನು ಮೊದಲೇ ಹೇಳಿದ ಹಾಡನ್ನು ಯಾಕೆ ಹಾಕಲಿಲ್ಲ ಎಂದು ಹೇಳುತ್ತಾ ತನ್ನ ಜೊತೆಗಿದ್ದವರ ಮುಂದೆ ಭಾವುಕಳಾಗುವುದನ್ನು ಕಾಣಬಹುದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *