LATEST NEWS
ಲಂಚ ಪಡೆದ ಲೇಡಿ ಕಾನ್ಸ್ ಟೇಬಲ್ ಸಸ್ಪೆಂಡ್

ಮುಂಬೈ, : ದ್ವಿಚಕ್ರ ವಾಹನ ಸವಾರರಿಂದ ಲಂಚ ಪಡೆದಿದ್ದ ಮಹಿಳಾ ಪೊಲೀಸ್ ಪೇದೆಯನ್ನ ಅಮಾನುತು ಮಾಡಿ ಪಿಂಪರಿ ಚಿಂಚವಾಡಾದ ಟಾಫಿಕ್ ವಿಭಾಗದ ಎಸಿಪಿ ಶ್ರೀಕಾಂತ್ ದಿಸ್ಲೇ ಆದೇಶಿಸಿದ್ದಾರೆ. ಪಿಂಪರಿ ನಗರದ ಶಗುಣ್ ಚೌಕ್ ಬಳಿ ಮಹಿಳಾ ಪೇದೆ ಸ್ವಾತಿ ಸೋನರ್ ಡ್ಯೂಟಿಗೆ ಹಾಕಲಾಗಿತ್ತು.
ಕೊರೊನಾ ಭಯದಿಂದ ನೋಟುಗಳನ್ನ ಕೈಯಲ್ಲಿ ಮುಟ್ಟದ ಸ್ವಾತಿ ಸೋನರ್, ಯುವತಿಗೆ ಜೇಬಿಗೆ ಇಡುವಂತೆ ಹೇಳಿದ್ದಾರೆ. ಈ ಎಲ್ಲ ದೃಶ್ಯಗಳು ಸಾರ್ವಜನಿಕರ ಮೊಬೈಲನಲ್ಲಿ ಸರೆಯಾಗಿದ್ದವು. ವೀಡಿಯೋ ವೈರಲ್ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಲಂಚ ಪಡೆದ ಪೇದೆಯನ್ನು ಅಮಾನತ್ತುಗೊಳಿಸಿದ್ದಾರೆ

ಹೆಲ್ಮೆಟ್ ಹಾಕದೆ ಬಂದ ತಾಯಿ ಮಗಳನ್ನು ತಡೆದ ಸ್ವಾತಿ , ಕೆಲಸಮಯ ಮಾತಾಡಿದ ನಂತರ ಯುವತಿ ಸ್ವಾತಿಯ ಪ್ಯಾಂಟ್ ಜೇಬಿಗೆ ಹಣ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ಆಧಾರದ ಮೇಲೆ ಪೇದೆಯನ್ನು ಅಮಾನತುಗೊಳಿಸಲಾಗಿದೆ.