Connect with us

    LATEST NEWS

    ಜಪಾನ್ ನಲ್ಲಿ ಭಾರಿ ಭೂಕಂಪನ, 7.1 ತೀವೃತೆ ದಾಖಲು, ಸುನಾಮಿ ಎಚ್ಚರಿಕೆ..!

    ಟೋಕಿಯೊ:  ದ್ವೀಪ ರಾಷ್ಟ್ರ ಜಪಾನ್ ನಲ್ಲಿ ಇಂದು ಗುರುವಾರ ಭಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 7.1 ಎಂದು ದಾಖಲಾಗಿದೆ.

    ಭೂಕಂಪನ ಕೇಂದ್ರವು ದಕ್ಷಿಣ ಜಪಾನ್ ಆಗಿತ್ತು ಎಂದು ಹೇಳಲಾಗಿದೆ. ಭೂಕಂಪನ ಕೇಂದ್ರ ಸ್ಥಾನವು ನಿಚಿಯಾನ್ ನಿಂದ 20 ಕಿಮೀ ದೂರದಲ್ಲಿ, 25 ಕಿಮೀ ಆಳದಲ್ಲಿತ್ತು ಎನ್ನಲಾಗಿದೆ. ಇದರ ಬೆನ್ನಿಗೇ ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಜಪಾನ್ ನ ಭೂಕಂಪನ ನಿಗಾ ಸಂಸ್ಥೆ NERV ಪ್ರಕಾರ, ಹ್ಯೂಗಾ-ನಾಡಾ ಸಮುದ್ರದಲ್ಲಿ ಭೂಕಂಪನ ವರದಿಯಾಗಿದೆ.

     

    ಭೂಕಂಪನದ ನಂತರ ಒಂದು ಮೀಟರ್ ಎತ್ತರದ ಅಲೆಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರಾವಳಿ ಪ್ರದೇಶಗಳು, ನದಿ ತೀರಗಳು ಅಥವಾ ಕೆರೆಗಳ ಬಳಿ ವಾಸಿಸುತ್ತಿರುವವರಿಗೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

    ಇನ್ನು ಭೂಕಂಪದಿಂದ ಯಾವುದಾದರೂ ಹಾನಿ ಸಂಭವಿಸಿದೆಯೇ ಎನ್ನುವುದನ್ನು ಕ್ಯುಶು ಮತ್ತು ಶಿಕೋಕುದಲ್ಲಿನ ಪರಮಾಣು ಸ್ಥಾವರಗಳ ನಿರ್ವಾಹಕರು ತನಿಖೆ ನಡೆಸುತ್ತಿದ್ದಾರೆ.ಜಪಾನ್‌ನ NHK ಸ್ಟೇಟ್ ಟೆಲಿವಿಷನ್,ಭೂಕಂಪದ ಕೇಂದ್ರದ ಸಮೀಪವಿರುವ  ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಕಿಟಕಿಗಳು ಮುರಿದಿರುವ ಬಗ್ಗೆ ವರದಿ ಮಾಡಿದೆ.  ಜಪಾನ್ ಪೆಸಿಫಿಕ್ ‘ರಿಂಗ್ ಆಫ್ ಫೈರ್’ನಲ್ಲಿದೆ.ಇದು ವಿಶ್ವದ ಅತ್ಯಂತ ಭೂಕಂಪನ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಜನವರಿ 1 ರಂದು ಜಪಾನ್‌ನ ಉತ್ತರ-ಮಧ್ಯ ಪ್ರದೇಶದಲ್ಲಿ ನೊಟೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 240 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

    ಇದನ್ನು ಓದಿ..

    ಮಂಗಳೂರಿನಲ್ಲಿ ಕೇರಳ ಉದ್ಯಮಿ ಅಪಹರಣ,10 ಲಕ್ಷ ಹಣಕ್ಕೆ ಬೇಡಿಕೆ..!?

     

    Share Information
    Advertisement
    Click to comment

    You must be logged in to post a comment Login

    Leave a Reply