Connect with us

    LATEST NEWS

    ಗನ್ ಹಿಡಿದು ಕೊಂಡು ಬಂದಿದ್ದ ನಾಲ್ವರನ್ನು ಪೊರಕೆಯ ಕೋಲಿನಿಂದ ಓಡಿಸಿದ ಮಹಿಳೆ….!! ವಿಡಿಯೋ ವೈರಲ್

    ಭಿವಾನಿ (ಹರಿಯಾಣ): ತನ್ನ ಸ್ಥಳೀಯ ನಿವಾಸದ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿದ ನಾಲ್ಕು ಮಂದಿ ಗನ್ ಧಾರಿಗಳನ್ನು ಮಹಿಳೆಯೊಬ್ಬರು ನಿತ್ಯ ಗುಡಿಸುವ ಪೊರಕೆಯಿಂದ ಓಡಿಸಿರುವ ಕುತೂಹಲಕಾರಿ ಘಟನೆ ಇಲ್ಲಿ ಮಂಗಳವಾರ ನಡೆದಿದೆ.


    ಬೈಕ್‌ನಲ್ಲಿ ಬಂದಿದ್ದ ಹಂತಕರನ್ನು ಮಹಿಳೆಯೊಬ್ಬರು ಪೊರಕೆಯಿಂದ ಬೆನ್ನಟ್ಟಿದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ. ಹರಿಕಿಶನ್ ಸಂತ್ರಸ್ತ ವ್ಯಕ್ತಿ. ಮಂಗಳವಾರ ಭಿವಾನಿಯ ದಾಬು‌ರ್ ಕಾಲೋನಿಯಲ್ಲಿ ಬೆಳಗ್ಗೆ ಸುಮಾರು 7.30ಕ್ಕೆ ತಮ್ಮ ನಿವಾಸದ ಗೇಟಿನ ಬಳಿ ನಿಂತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ಹಂತಕರು ಅವರತ್ತ ಗುಂಡು ಹಾರಿಸಿದ್ದಾರೆ. ತಕ್ಷಣ ಹರಿಕಿಶನ್ ಗೇಟಿನ ಒಳಗೆ ಹೋದರು. ಅವರ ಬಲಗಾಲಿಗೆ ಗುಂಡು ತಗುಲಿತ್ತು. ಆದರೂ ಹಂತಕರು ಗೇಟಿನ ಹೊರಗಿನಿಂದ
    ಗುಂಡು ಹಾರಿಸಲು ಆರಂಭಿಸಿದರು. ಇದನ್ನು ದೂರದಿಂದ ಗಮನಿಸಿದ ಮಹಿಳೆಯೊಬ್ಬರು ಧೈರ್ಯದಿಂದ ಕೈಯಲ್ಲಿ ಕಸದ ಪೊರಕೆ ಹಿಡಿದು ಹಂತಕರನ್ನು ಬೆದರಿಸಿದರು. ಇದರಿಂದ ಬೆದರಿದ ಹಂತಕರು ಅಲ್ಲಿಂದ ಕಾಲ್ಕಿತ್ತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ದಾಳಿಕೋರರು 9 ಸುತ್ತು ಗುಂಡು ಹಾರಿಸಿ ದ್ದಾರೆ. ಅದರಲ್ಲಿ ನಾಲ್ಕು ಗುಂಡು ತಗುಲಿ ಹರಿಕಿಶನ್ ಗಾಯಗೊಂಡಿದ್ದು ಪಿಜಿಐಎಂಎಸ್ ರೋಪ್ತಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಹರಿಕಿಶನ್ ಗ್ಯಾಂಗ್‌ಸ್ಟರ್‌ ಲಾರೆನ್ ಬಿಷ್ಟೋಯಿ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದ್ದು ರವಿ ಬಾಕ್ಸರ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ ಹಾಗೂ 3 ತಿಂಗಳಿನಿಂದ ಜಾಮೀನು ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸು ತ್ತಿದ್ದು ನಾಲ್ವರು ಹಂತಕರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಮಾಧ್ಯಮಗಳಿಗೆ ಹೇಳಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply