LATEST NEWS
ಕುಡಿತದ ಅಮಲಿನಲ್ಲಿ ತುಂಬಿರುವ ಕಿಂಡಿ ಅಣೆಕಟ್ಟಿನಲ್ಲಿ ಈಜಲು ಹೋದ ಯುವಕನ ರಕ್ಷಣೆ
ಕುಡಿತದ ಅಮಲಿನಲ್ಲಿ ತುಂಬಿರುವ ಕಿಂಡಿ ಅಣೆಕಟ್ಟಿನಲ್ಲಿ ಈಜಲು ಹೋದ ಯುವಕನ ರಕ್ಷಣೆ
ಮಂಗಳೂರು ಆಗಸ್ಟ್ 02: ಕುಡಿತದ ಅಮಲಿನಲ್ಲಿ ಕಿಂಡಿ ಅಣೆಕಟ್ಟಿನಿಂದ ನದಿಗೆ ಬಿದ್ದಿದ್ದ ಯುವತನೊಬ್ಬನನ್ನು ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುಡಿತದ ಅಮಲಿನಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ತುಂಬಿ ಹರಿಯುತ್ತಿರುವ ನೀರಿಗೆ ಧುಮುಕಿದ ಕುಡುಕನೊಬ್ಬನ ಕಥೆ ಇದು.
ಬುಧವಾರ ಸಂಜೆ ಇಲ್ಲಿಯ ಸ್ಥಳೀಯ ನಿವಾಸಿ ಶರತ್ ಕುಡಿತದ ಅಮಲಿನಲ್ಲಿ ಹತ್ತಿರದಲ್ಲೇ ಇರುವ ಮರವೂರು ಕಿರು ಡ್ಯಾಮ್ ವೀಕ್ಷಿಸಲು ಹೋಗಿದ್ದರು. ಡ್ಯಾಮ್ ನಲ್ಲಿ ನೀರು ತುಂಬಿರುವುದನ್ನು ಕಂಡ ಶರತ್ ಕುಡಿತದ ಅಮಲಿನಲ್ಲೆ ನೀರಿನಲ್ಲಿ ಈಜಲು ನೀರಿಗೆ ಹಾರಿದ್ದಾನೆ. ಆದರೆ ಮಳೆಗಾಲದ ಸಂದರ್ಭ ಆಗಿರುವುದರಿಂದ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದು, ನೋಡುನೋಡು ತ್ತಿದ್ದಂತೆ ಶರತ್ ಕಿಂಡಿ ಆಣೆ ಕಟ್ಟಿನ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯಕ್ಕೆ ಸಿಲುಕಲಿದ್ದಾನೆ.
ಇದನ್ನು ಕಂಡ ಸ್ಥಳೀಯ ಯುವಕರು ಶರತ್ ನ ರಕ್ಷಣೆಗಾಗಿ ಟ್ಯೂಬ್ ಹಾಗೂ ಹಗ್ಗದ ಮೂಲಕ ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಕುಡಿತದ ಅಮಲಿನಲ್ಲಿದ್ದ ಶರತ್ ನ ರಕ್ಷಣೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಯುವಕ ಜೆಕ್ಲಿನ್ ಡಿಸೋಜಾ ನೀರಿಗೆ ದುಮುಕಿ ಅಪಾಯದಲ್ಲಿದ್ದ ಶರತ್ ನನ್ನು ರಕ್ಷಿಸಿದ್ದಾನೆ.
ಇದೀಗ ಶರತ್ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕ ಜೆಕ್ಲೆನ್ ಡಿಸೋಜಾ ರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.