Connect with us

    LATEST NEWS

    ಸುರತ್ಕಲ್ ಗುಡ್ಡೆಕೊಪ್ಲ್ ಬೀಚ್ ನಲ್ಲಿ ಬಾಲಕ ನೀರುಪಾಲು

    ಸುರತ್ಕಲ್ ಫೆಬ್ರವರಿ 28: ಸುರತ್ಕಲ್ ನ ಗುಡ್ಡೆಕೊಪ್ಲ್ ಬೀಚನಲ್ಲಿ ಸಮುದ್ರಕ್ಕಿಳಿದ ಬಾಲಕನೋರ್ವ ನೀರುಪಾಲಾದ ಘಟನೆ ಇಂದು ನಡೆದಿದೆ.


    ಮೃತ ಬಾಲಕ ಶಿವಮೊಗ್ಗ ಮೂಲದ ಮುಬಾರಕ್‌ (13) ಎಂದು ಗುರುತಿಸಲಾಗಿದೆ. ಬಾಲಕ ತನ್ನ ತಂದೆ, ತಾಯಿಯೊಂದಿಗೆ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಎಂದು ಹೇಳಲಾಗಿದೆ. ಬಳಿಕ ಬಾಲಕ ತನ್ನ ತಂದೆ, ತಾಯಿ ಹಾಗೂ ಸಂಬಂಧಿಕರೊಂದಿಗೆ ಸಮುದ್ರ ತೀರಲ್ಲಿ ಆಟವಾಡಿದ್ದು ಈ ವೇಳೆ ದೊಡ್ಡ ಅಲೆಯೊಂದಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ. ಈ ಸಂದರ್ಭ ಬಾಲಕನ ತಂದೆಯನ್ನು ರಕ್ಷಿಸಲಾಗಿದೆ.

    ಪ್ರಸ್ತುತ ಸ್ಥಳೀಯರು ಹಾಗೂ ಸಿಎಸ್‌ಪಿ ಪೊಲೀಸರು ಬಾಲಕನ ಹುಡುಕಾಟ ನಡೆಸುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *