BELTHANGADI
ಕೊಕ್ಕಡ – ಕಾರು ರಿವರ್ಸ್ ತೆಗೆಯುವ ವೇಳೆ ಕಾರಿನಡಿಗೆ ಬಿದ್ದು ಬಾಲಕ ಸಾವು
ಬೆಳ್ತಂಗಡಿ ಅಕ್ಟೋಬರ್ 1: ಮನೆ ಅಂಗಳದಿಂದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಬಾಲಕನೊಬ್ಬ ಆಕಸ್ಮಿಕವಾಗಿ ಕಾರಿನಡಿಗೆ ಬಿದ್ದು ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಹಮೀದ್ ಎಂಬವರ ಮಗ ನವಾಫ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಬಾಲಕ ಆತೂರಿನ ಆಯಿಷಾ ಸ್ಕೂಲ್ ನ 4ನೇ ತರಗತಿಯ ವಿಧ್ಯಾರ್ಥಿಯಾಗಿದ್ದಾನೆ. ಮನೆಯಂಗಳದಲ್ಲಿದ್ದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಕಾರಿನ ಹಿಂಬದಿ ನಿಂತಿದ್ದ ನವಾಫ್ ಮೇಲೆ ಕಾರು ಹರಿದಿದೆ. ಈ ವೇಳೆ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ನವಾಫ್ ಅವರು ಕಾರಿನ ಹಿಂಬದಿ ನಿಂತಿದ್ದದ್ದು ಅರಿವಿಗೆ ಬಾರದೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login