KARNATAKA
ಫಿಟ್ನೆಸ್ ಬಾಡಿ ತೋರಿಸಲು ಹೋಗಿ ಬ್ಲಾಕ್ ಮೇಲ್ ಗೊಳಗಾದ ಯುವಕ…!
ಬೆಂಗಳೂರು, ಫೆಬ್ರವರಿ 22: ಇತ್ತೀಚಿನ ದಿನಗಳಲ್ಲಿ ಮೋಸ ಮಾಡಲು ಯಾವ ರೀತಿ ಹೊಸ ಉಪಾಯಗಳನ್ನು ಜನ ಮಾಡುತ್ತಾರೆಂದರೆ ಸಂಬಂಧಗಳನ್ನು ಬೆಸೆಯುವ ಮ್ಯಾಟ್ರಿಮೋನಿಯಲ್ ವೇದಿಕೆಗಳನ್ನು ಬಿಟ್ಟಿಲ್ಲ, ಫಿಟ್ನೆಸ್ ನೋಡಬೇಕೆಂದು ಯುವಕನ ಬೆತ್ತಲೆ ಚಿತ್ರ ಪಡೆದ ಯುವತಿ ಬ್ಲಾಕ್ ಮೇಲ್ ಮಾಡಿ ಹಣ ಪಡೆದ ಪ್ರಕರಣ ಬೆಳಕಿಗೆ ಬಂದಿದೆ.
ಆನ್ಲೈನ್ ಮ್ಯಾಟ್ರಿಮೋನಿಯಲ್ ವೇದಿಕೆಗಳಲ್ಲಿ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ ಯುವಕನನ್ನು ಪರಿಚಯಿಸಿಕೊಂಡಿದ್ದ ಯುವತಿ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಯುವಕನಿಗೆ ಬೆತ್ತಲಾಗಲು ಹೇಳಿದ್ದು, ವಿಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡಿ ಹಣ ಪಡೆದುಕೊಂಡಿದ್ದಾಳೆ.
ಹುಳಿಮಾವು ನಿವಾಸಿಯಾಗಿರುವ 33 ವರ್ಷದ ಯುವಕ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಪರಿಚಯವಾಗಿದ್ದ ಯುವತಿ ವಾಟ್ಸಾಪ್ ಚಾಟ್ ಆರಂಭಿಸಿದ್ದಾಳೆ. ನಿನ್ನನ್ನು ಮದುವೆಯಾಗುತ್ತೇನೆ. ಫಿಟ್ನೆಸ್ ನೋಡಬೇಕು ಎಂದು ನಂಬಿಸಿದ್ದಾಳೆ. ಫೆಬ್ರವರಿ 7 ರಂದು ಬೆತ್ತಲಾಗಲು ಪ್ರಚೋದಿಸಿ ಫೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು.
ನಂತರದಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಬೆತ್ತಲೆ ಫೋಟೋ ಹಾಗು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿದ್ದಾಳೆ. ಇದರಿಂದ ಕಂಗಾಲಾದ ಯುವಕ 20 ಸಾವಿರ ರೂ. ಕೊಟ್ಟಿದ್ದು, ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
Facebook Comments
You may like
ಮಧ್ಯಪಾನ ವಿರೋಧಿಸಿದ ವಧುವಿಗೆ ಪೊಲೀಸರಿಂದ ನಗದು ಬಹುಮಾನ!
ಮದುವೆ ಮಂಟಪವಾಗಿ ಬದಲಾದ ಜೈಲು…!
ಐಶಾರಾಮಿ ಕಾರು ಮಾರಾಟ ಪ್ರಕರಣ – ಎಸ್ಐ ಕಬ್ಬಾಳರಾಜ್, ಇನ್ ಸ್ಪೆಕ್ಟರ್ ರಾಮಕೃಷ್ಣ ಸಸ್ಪೆಂಡ್
ಹಾಡುಹಗಲೇ ದರೋಡೆಗೆ ಬಂದವರು ಅಗ್ನಿಶಾಮಕ ದಳದ ಸೈರನ್ ಕೇಳಿ ಎಸ್ಕೇಪ್…!!
ಸಿಸಿಬಿ ಪೊಲೀಸರ ವಿರುದ್ದ ಸಿಐಡಿ ತನಿಖೆ ಆರಂಭ.. ಆರೋಪಿಗಳು ಇನ್ನೂ ಕರ್ತವ್ಯದಲ್ಲಿ…!!
ಡಿಎಸ್ಪಿಯಾಗಿ ಚಿನ್ನದ ಓಟಗಾರ್ತಿ ‘ಹಿಮದಾಸ್’ ಅಧಿಕಾರ ಸ್ವೀಕಾರ
You must be logged in to post a comment Login