LATEST NEWS
ಪ್ರತೀಕಾರಕ್ಕಾಗಿ ವಿದ್ವಂಸಕ ಕೃತ್ಯಕ್ಕೆ ಮುಂದಾದ ಬಾಂಬರ್ ಆದಿತ್ಯ ರಾವ್

ಪ್ರತೀಕಾರಕ್ಕಾಗಿ ವಿದ್ವಂಸಕ ಕೃತ್ಯಕ್ಕೆ ಮುಂದಾದ ಬಾಂಬರ್ ಆದಿತ್ಯ ರಾವ್
ಮಂಗಳೂರು, ಜನವರಿ 22: ಪ್ರತೀಕಾರಕ್ಕಾಗಿ ವಿಧ್ವಂಸಕ ಕೃತ್ಯ ಎಸೆದಿರೋದಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರೋ ಆರೋಪಿ ಆದಿತ್ಯ ರಾವ್ ಪೋಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಸರಿಯಾದ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆದಿತ್ಯರಾವ್ ಯೂಟೂಬ್ ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿ ಬಾಂಬ್ ಇರಿಸಿರುವುದಾಗಿ ಆತ ಒಪ್ಪಿಕೊಂಡಿದ್ದು, ಬಾಂಬ್ ತಯಾರಿಕಾ ಮಾಹಿತಿಯನ್ನೂ ಯೂಟೂಬ್ ಮೂಲಕವೇ ಪಡೆದಿದ್ದಾ

ನೆ. ಬಾಂಬ್ ತಯಾರಿಕೆಗಾಗಿ ಕಳೆದ ಎರಡು ತಿಂಗಳಿನಿಂದ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದ ಎನ್ನುವುದು ತಿಳಿದು ಬಂದಿದೆ.
ಬೆಂಗಳೂರು ಪೋಲೀಸರಿಗೆ ಶರಣಾಗತಿಯಾಗಿದ್ದ ಬಾಂಬರ್ ಆದಿತ್ಯ ರಾವ್ ನನ್ನು ಮಂಗಳೂರಿಗೆ ವಿಮಾನ ಮೂಲಕ ಕರೆತರಲಾಗಿದ್ದು, ಪಣಂಬೂರು ಎಸಿಪಿ ಠಾಣೆಯಲ್ಲಿ ನಿನ್ನೆ ತಡರಾತ್ರಿಯವರೆಗೆ ಪೋಲೀಸರು ತೀವೃ ವಿಚಾರಣೆ ನಡೆಸಿದ್ದಾರೆ.
ಸಮಾಜದ ವ್ಯವಸ್ಥೆಯ ಬಗ್ಗೆ ಆಕ್ರೋಶದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ಪೋಲೀಸರಿಗೆ ತಿಳಿಸಿದ್ದಾನೆ.
ಇಂದು ಆದಿತ್ಯ ರಾವ್ ನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದ್ದು, ಈತನ ಮೇಲೆ ಇನ್ನೊಂದು ಕೇಸನ್ನೂ ಪೋಲೀಸರು ದಾಖಲಿಸಿದ್ದಾರೆ.
ಮಂಗಳೂರಿನಿಂದ ಹೈದರಾಬಾದ್ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಈತನೇ ಬೆದರಿಕೆ ಕರೆ ಮಾಡಿದ ಹಿನ್ನಲೆಯಲ್ಲಿ ಈತನ ವಿರುದ್ಧ ಬಜಪೆ ಪೋಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ.