Connect with us

    DAKSHINA KANNADA

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ , NIA ತನಿಖೆಗೆ ಬಜರಂಗದಳ ಆಗ್ರಹ..!

    ಮಂಗಳೂರು :  ಶುಕ್ರವಾರ  ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆದ ಬಾಂಬ್  ಸ್ಪೋಟ  ಪ್ರಕರಣವನ್ನು ಎನ್‌ಐಎ ಗೆ ವಹಿಸಿಕೊಡಬೇಕೆಂದು ಬಜರಂಗದಳ ಸರ್ಕಾರವನ್ನು ಆಗ್ರಹಿಸಿದೆ.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಜರಂಗದಳ ವಿಭಾಗ ಸಂಯೋಜಕರಾದ ಭುಜಂಗ ಕುಲಾಲ್ ರಾಮೇಶ್ವರಂ ಕೆಫೆಯಲ್ಲಿ ಎರಡು ಬಾರಿ ನಿಗೂಢ ಬಾಂಬ್ ಸ್ಫೋಟವಾಗಿದ್ದು,ಕಳೆದ ವರ್ಷ ಹಲವು ಬಾರಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳ ಬಂದಿದ್ದರೂ. ಆದರೆ ಇವರೆಗೂ ಹುಸಿ ಕರೆ ಸಂಬಂಧ ಯಾರ ಬಂಧನವೂ ಆಗಿಲ್ಲ. ಇದರ ಹಿಂದೆ ನಿಷೇಧಿತ ಭಯೋದ್ಫಾದಕ ಸಂಘಟನೆ PFI ಕೈವಾಡವಿರುವ ಶಂಕೆ ಇದ್ದು, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ಮರೆಮಾಚಲು ಈ ಘಟನೆ ನಡೆಸಿರುವ ಸಂಶಯವಿದೆ. ಅಲ್ಲದೆ ಇದೇ ರಾಮೇಶ್ವರಂ ಕೆಫೆಯಲ್ಲಿ ಅಯೋಧ್ಯೆ ಪ್ರಾಣಪ್ರತಿಷ್ಠೆಯ ದಿನ ಕಾರ್ಯಕ್ರಮ ನಡೆದಿದ್ದು ಹಾಗಾಗಿ ಈ ಹೋಟೆಲನ್ನು ಗುರಿಯಾಗಿಸಿಕೊಂಡು ಈ ಕೃತ್ಯ ನಡೆದಿರುವ ಸಾಧ್ಯತೆಗಳಿವೆ. ಅದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ NIA ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply