LATEST NEWS
ಮಂಗಳೂರು ಏರ್‌ಪೋರ್ಟ್ ಶ್ವಾನ ಪಡೆಯ ಕಾರ್ಯವೈಖರಿ ಪ್ರಶಂಸಿಸಿದ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ..!

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯ ಹೊಣೆ ಹೊತ್ತ ಸಿಐಎಸ್‌ಎಫ್ ಶ್ವಾನ ಪಡೆ(Canine Squad)ಯ ಕಾರ್ಯವೈಖರಿಯನ್ನು ಖ್ಯಾತ ಬಾಲಿವುಡ್ ನಟ, ತುಳುವ ಸುನೀಲ್ ಶೆಟ್ಟಿ (sunil shetty) ಪ್ರಶಂಸಿಸಿದ್ದಾರೆ.
ಮಂಗಳೂರು ನಗರದಲ್ಲಿ ದಸರಾ ಪ್ರಯುಕ್ತ ಆಯೋಜಿದ್ದ ಪಿಲಿ ನಲಿಕೆ 8ನೇ ಆವೃತ್ತಿಯ ಮುಖ್ಯ ಅಥಿತಿಯಾಗಿ ಪಾಲ್ಗೊಳ್ಳಲು ಸುನೀಲ್ ಶೆಟ್ಟಿ ( sunil shetty) ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ವಿಮಾನ ನಿಲ್ದಾಣದ ಭದ್ರತೆ ಹೊತ್ತ ಸಿಐಎಸ್‌ಎಫ್ ನ ಕ್ಯಾನೆನ್ ಸ್ಕ್ವಾಡ್ (Dog sqaud) ನ್ನು ಕಂಡು ಕೆಲ ಹೊತ್ತು ಶ್ವಾನಗಳೊಂದಿಗೆ ಕಳೆದರು.

ಏರ್‌ಪೋರ್ಟ್ ಭದ್ರತಾ ದಳದ ಸದಸ್ಯರಾದ ಗೋಲ್ಡಿ ಮತ್ತು ರೇಂಜರ್ ಅವರೊಂದಿಗೆ ಕಂಡು ಪ್ರೀತಿಯಿಂದ ತಲೆ ಸವರಿ ಅವುಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು ಅವುಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಮುಂದಕ್ಕೆ ಸಾಗಿದ್ದಾರೆ.ಮಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ಇದರ ಫೊಟೊಗಳನ್ನುಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದಾರೆ.