Connect with us

  FILM

  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ನಟ ವರುಣ್ ಧವನ್

  ಮುಂಬೈ ನವೆಂಬರ್ 07: ಬಾಲಿವುಡ್ ನ ಯುವನಟ ವರುಣ್ ಧವನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಈ ಕುರಿತಂತೆ ಸ್ವತಃ ವರುಣ್ ಮಾಹಿತಿ ನೀಡಿದ್ದಾರೆ.

  ಸ್ಟಾರ್ ನಟ ವರುಣ್ ಧವನ್ ಸದ್ಯ `ಭೇಡಿಯಾ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮಗಿರುವ ಆರೋಗ್ಯದ ಸಮಸ್ಯೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ವರುಣ್, ವೆಸ್ಟಿಬುಲಾರ್ ಹೈಪೋಫಂಕ್ಷನ್ ಎಂಬ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದಾರೆ. ಕೋವಿಡ್‌ಗೂ ಮುನ್ನ ಈ ಅಪರೂಪದ ರೋಗದ ಬಗ್ಗೆ ನಟನ ಗಮನಕ್ಕೆ ಬಂದಿದ್ದು, ಕೋವಿಡ್ ನಂತರ ಅವಧಿಯಿಂದ ಸಾಕಷ್ಟು ಕಷ್ಟಪಡುತ್ತಿರೋದಾಗಿ ತಿಳಿಸಿದ್ದಾರೆ.


  ಇದೊಂದು ಡಿಸಾರ್ಡರ್ ಆಗಿದ್ದು ಇದರಲ್ಲಿ ಕಿವಿಯ ಆಂತರಿಕ ಭಾಗದಲ್ಲಿರುವ ಹಾಗೂ ಶರೀರ ಸಮತೋಲನಕ್ಕೆ ಪ್ರಮುಖವಾಗಿರುವ ಭಾಗವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈ ಪರಿಣಾಮವಾಗಿ ವ್ಯಕ್ತಿ ತಲೆ ತಿರುಗಿ ಸಮತೋಲನವನ್ನೇ ಕಳೆದುಕೊಳ್ಳುತ್ತಾನೆ. ಇದು ಈ ರೋಗದ ಲಕ್ಷಣವಾಗಿದೆ

  Share Information
  Advertisement
  Click to comment

  You must be logged in to post a comment Login

  Leave a Reply