LATEST NEWS
ಭಾರತ್ ಮಾತಾ ಕಿ ಜೈ ಎಂದ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣ – ಐವರು ಆರೋಪಿಗಳು ಅರೆಸ್ಟ್
ಮಂಗಳೂರು ಜೂನ್ 10: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನದ ಸಂದರ್ಭ ವಿಜಯೋತ್ಸವ ಆಚರಿಸಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಣೆ ಮಾಡಿದ್ದಕ್ಕಾಗಿ ಇಬ್ಬರಿಗೆ ಚೂರಿ ಇರಿದ ತಂಡದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಾಕೀರ್(28), ಅಬ್ದುಲ್ ರಜಾಕ್(40), ಅಬೂಬಕ್ಕರ್ ಸಿದ್ದಿಕ್ (35), ಸವಾದ್(18) ಹಾಗೂ ಹಫೀಝ್ (24) ಎಂದು ಗುರುತಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಬೊಳಿಯಾರ್ ಬಾರ್‌ನ ಮುಂಭಾಗದಲ್ಲಿ ಅಳವಡಿಕೆ ಮಾಡಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಈ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಘಟನೆ ಸಂಬಂಧ ಇನ್ನೂ ಹಲವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ವೇಳೆ ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡುತ್ತಾ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ಬೈಕ್‌ನಲ್ಲಿ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಸುಮಾರು 20-25 ಜನರ ಮುಸ್ಲಿಮರ ಗುಂಪು ಬೆನ್ನಟ್ಟಿ ಇಬ್ಬರಿಗೆ ಚೂರಿ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲಿಯೇ ಸಿಸಿಟಿವಿ ಕ್ಯಾಮೆರಾ ಅಧರಿಸಿ ಕೊಣಾಜೆ ಪೊಲೀಸರು ಐವರು ಮುಸ್ಲಿಂ ಆರೋಪಿಗಳನ್ನು ಬಂಧಿಸಿದ್ದಾರೆ.