LATEST NEWS
ಕುಂದಾಪುರ – ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರಲ್ಲಿ ಒಬ್ಬರ ಮೃತದೇಹ ಪತ್ತೆ…!!

ಬೈಂದೂರು ಸೆಪ್ಟೆಂಬರ್ 18: ಬೈಂದೂರು ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಗುಚಿದ ಪರಿಣಾಮ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಪೈಕಿ ಓರ್ವನ ಶವ ಪತ್ತೆಯಾಗಿದೆ. ಪತ್ತೆಯಾದ ಮೃತ ದೇಹ ಶರಣ್ ( 25 ) ಎಂದು ಗುರುತಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೊರ್ವ ಮೀನುಗಾರ ಅಣ್ಣಪ್ಪ ( 30 ) ಅವರ ಶೋಧ ಕಾರ್ಯ ಮುಂದುವರೆದಿದೆ.
ಚರಣ ಖಾರ್ವಿ ಮಾಲಿಕತ್ವದ ಜೈ ಗುರುಜಿ ನಾಡ ದೋಣಿ ತೆರೆಯ ಹೊಡೆತಕ್ಕೆ ಸಿಕ್ಕಿ ಮಗುಚಿ ಬಿದ್ದಿದ್ದು ದೋಣಿಯಲ್ಲಿದ್ದ ಇಬ್ಬರು ಕಾಣೆಯಾಗಿದ್ದಾರೆ. ದೋಣಿಯಲ್ಲಿದ್ದ ಇತರೆ ನಾಲ್ಕೈದು ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರದ್ದಾರೆ.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೀನುಗಾರರು, ಮುಳುಗು ತಜ್ಞರು ಕಾಣೆಯಾದವರ ಹುಡುಕಾಟ ನಡೆಸಲಾಗಿತ್ತು.
ಇಂದು ಬೆಳಿಗ್ಗೆ ಸಂದರ್ಭ ಅಮ್ಮನವರ ತೊಪ್ಪಲು ಸಮುದ್ರ ತೀರದಲ್ಲಿ ಶರಣ್ ಅವರ ಮೃತ ದೇಹ ಪತ್ತೆಯಾಗಿದೆ.