Connect with us

    LATEST NEWS

    ಬಾಂಗ್ಲಾ ದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ಬಿಎನ್‌ಪಿ ಕಾರ್ಯಕರ್ತರ ಆಕ್ರೋಶ, 100ಕ್ಕೂ ಅಧಿಕ ಬಸ್‌ಗಳಿಗೆ ಬೆಂಕಿ..!

    ಢಾಕಾ : ದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಕರೆ ನೀಡಿದ್ದ ಮೂರು ದಿನಗಳ ಮುಷ್ಕರ ಹಿಂಸಾ ರೂಪ ತಾಳಿದ್ದು ಢಾಕಾದಲ್ಲಿ ಬಿಎನ್‌ಪಿ ಕಾರ್ಯಕರ್ತರು ನೂರಕ್ಕೂ ಹೆಚ್ಚು ಬಸ್‌ಗಳಿಗೆ ಬೆಂಕಿ ಇಟ್ಟಿದ್ದು ಅರಾಜಕತೆ ಸೃಷ್ಟಿಯಾಗಿದೆ.


    ಪ್ರಧಾನ ಮಂತ್ರಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಸರ್ಕಾರವು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷವಾದ ಬಿಎನ್‌ಪಿಯ ಜಂಟಿ ಕಾರ್ಯದರ್ಶಿ ರುಹುಲ್ ಕಬೀರ್ ರಿಜ್ವಿ ಅಕ್ಟೋಬರ್ 31 ರಿಂದ ಮೂರು ದಿನಗಳ ಕಾಲ ದೇಶಾದ್ಯಂತ ಬಂದ್​ಗೆ ಕರೆ ನೀಡಿದ್ದರು. ಬುಧವಾರ ರಾಜಧಾನಿ ಢಾಕಾ ನಗರದ ವಿವಿಧ ಭಾಗಗಳಲ್ಲಿ ಐದು ಮಿನಿ ಬಸ್‌ಗಳು ಮತ್ತು ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಲಾಗಿತ್ತು.

    ರಾಜತಾಂತ್ರಿಕ ವಲಯವಾದ ಬರಿಧಾರಾ ಪ್ರದೇಶದಲ್ಲಿ ಬುಧವಾರ ಸಂಜೆ ದುಷ್ಕರ್ಮಿಗಳು ಬೋಯಿಶಾಖಿ ಪರಿಬಹಾನ್‌ಗೆ ಸೇರಿದ ಮಿನಿಬಸ್‌ಗೆ ಬೆಂಕಿ ಹಚ್ಚಿದರು ಮೀರ್‌ಪುರದಲ್ಲಿ ಖಾಸಗಿ ವಿಶ್ವವಿದ್ಯಾಲಯದ ಬಸ್​ವೊಂದಕ್ಕೂ ಸಹ ಬೆಂಕಿ ಹಚ್ಚಲಾಗಿದೆ. ಪ್ರಯಾಣಿಕರ ಸೋಗಿನಲ್ಲಿ ವೆಲ್ಕಮ್ ಪರಿಬಾಹನ್‌ನ ಗಬ್ಟೋಲಿಯಿಂದ ಹೊರಟಿದ್ದ ಬಸ್‌ ಹತ್ತಿದ ದುಷ್ಕರ್ಮಿಗಳು ಶ್ಯಾಮೋಲಿ ಚೌಕದ ಮುಂಭಾಗ ಬೆಂಕಿ ಹಚ್ಚಿದರು. ಎಲ್ಲಾ ಪ್ರಯಾಣಿಕರು ಮಿನಿ ಬಸ್‌ನಿಂದ ಸುರಕ್ಷಿತವಾಗಿ ಇಳಿದು ಹೊರಬರುವಲ್ಲಿ ಯಶಸ್ವಿಯಾದರು ಮೊಹಖಾಲಿ ಮೇಲ್ಸೇತುವೆ ಬಳಿ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್‌ಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.ಮುಗ್ದಾ ಪ್ರದೇಶದಲ್ಲಿ ಮತ್ತೊಂದು ಬಸ್‌ಗೆ ಬೆಂಕಿ ಹಚ್ಚಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಸಹಚರರು ಪರಾರಿಯಾಗಿದ್ದಾರೆ. ಕಫ್ರುಲ್‌ನಲ್ಲಿ ಜಮಾತ್-ಎ-ಇಸ್ಲಾಮಿ ಮತ್ತು ಬಿಎನ್‌ಪಿ ಸದಸ್ಯರು ಬಸ್​ವೊಂದಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯರು ಬೆಂಕಿಯನ್ನು ನಂದಿಸುವಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರಭಾರಿ ಅಧಿಕಾರಿ (ಒಸಿ) ಫರುಕುಲ್ ಅಲಂ ಕಫ್ರುಲ್ ತಿಳಿಸಿದ್ದಾರೆ. ಹಾಗೆಯೇ, ಗಂಜ್‌ನಲ್ಲಿ ಢಾಕಾ-ಚಿತ್ತಗಾಂಗ್ ಹೆದ್ದಾರಿಯನ್ನು ತಡೆದು ವಾಹನಗಳ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ. ಈ ಮಧ್ಯೆ, ದೇಶದ್ರೋಹದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಢಾಕಾದ ನ್ಯಾಯಾಲಯವು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಚೌಧರಿ ಹಸನ್ ಸರ್ವರ್ದಿ ಅವರನ್ನು ಎಂಟು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ದೊಂಬಿ ಗಲಾಟೆಲ್ಲಿ ಇದುವರೆಗೆ ಇಬ್ಬರು ಸಾವನ್ನಪಿದ್ದು, 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    .

     

    Share Information
    Advertisement
    Click to comment

    Leave a Reply

    Your email address will not be published. Required fields are marked *