Connect with us

    LATEST NEWS

    ಶಾಲಾ ಬಾಲಕ ಆತ್ಮಹತ್ಯೆ ಯತ್ನ : ಡೋಂಟ್ ಬ್ಲೇಮ್ ಮಿ ಇಟ್ಸ್ ನಾಟ್ ಬ್ಲೂವೇಲ್

              ಶಾಲಾ ಬಾಲಕ ಆತ್ಮಹತ್ಯೆ ಯತ್ನ : ಡೋಂಟ್ ಬ್ಲೇಮ್ ಮಿ ಇಟ್ಸ್ ನಾಟ್ ಬ್ಲೂವೇಲ್
    ಮಂಗಳೂರು,ಅಕ್ಟೋಬರ್ 07 : ಕಟ್ಟಡದಿಂದ ಜಿಗಿದು ಶಾಲಾ ಬಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ನಗರದಲ್ಲಿ ಸಂಭವಿಸಿದೆ.
    ಮಂಗಳೂರು ನಗರದ ಆಡುಮರೊಳಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿಯ ನಾಲ್ಕನೇ ಅಂತಸ್ತಿನ ಕಟ್ಟಡದಿಂದ ಶಾಲಾ ಬಾಲಕ ಕೆಳಗೆ ಜಿಗಿದಿದ್ದಾನೆ.

    ಮಂಗಳೂರು ನಗರದ  ಉರ್ವ ಖಾಸಾಗಿ ಶಾಲೆಯ  ವಿದ್ಯಾರ್ಥಿಯಾಗಿರುವ 16 ವರ್ಷದ ಕುಮಾರ್ ಪ್ರಥಮ್  10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ತನ್ನ ಆತ್ಮಹತ್ಯೆಗೆ ಮೊದಲು ಸೂಸೈಡ್ ನೋಟ್ ಬರೆದಿಟ್ಟಿರುವ ಬಾಲಕ ತನ್ನ ವ್ಯಾಸಾಂಗ ಒತ್ತಡಗಳಿಂದ ಬೇಸತ್ತಿದ್ದ ಎನ್ನಲಾಗಿದೆ. ಆತ್ಮಹತ್ಯೆ ಯತ್ಯಕ್ಕೂ ಮುನ್ನ ಡೆತ್ ನೋಟ್ ನಲ್ಲಿ ಆಯಾಮ್ ನಾಟ್ ಇಂಟ್ರೆಸ್ಟಡ್ ಇನ್ ಸ್ಟಡೀಸ್ ಡೋಂಟ್ ಬ್ಲೇಮ್ ( I am not interested in Studies don’t blame me ) ಎಂದು ಬರೆದಿರುವುದಾಗಿ ತಿಳಿದುಬಂದಿದೆ.

    ದುರ್ಘಟನೆಯಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ .ಈ ನಡುವೆ ಸೂಸೈಡ್ ನೋಟ್ ನಲ್ಲಿ ಬರೆದಿರುವ ಡೋಂಟ್ ಬ್ಲೇಮ್ ( Dont Blame) ಎಂಬ ಪದವನ್ನು ಬ್ಲೂ ವೇಲ್ ಗೇಮ್ ( Blue Wale game ) ಎಂದು ತಿರುಚಿ ಸುದ್ದಿ ಹರಿ ಬಿಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಬ್ಲೂ ವೇಲ್ ಗೂ ಹಾಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪೋಲಿಸ್ ಮೂಲಗಳು ಸ್ಪಷ್ಟಪಡಿಸಿವೆ. ಕಂಕನಾಡಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply