LATEST NEWS
ರಕ್ತದಾನದ ಮೂಲಕ ಜೀವ ಉಳಿಸುವ ಕಾರ್ಯ ಶ್ಲಾಘನೀಯ : ಡಾ.ಭರತ್ ಶೆಟ್ಟಿ ವೈ
ಮಂಗಳೂರು : ಹಿಂದೂ ಯುವ ಸೇನೆ ವೃಕ್ಷರಾಜ ಶಾಖೆ ಮತ್ತು ವೃಕ್ಷರಾಜ ಫ್ರೆಂಡ್ಸ್ ಕ್ಲಬ್ ಗ್ರಾಮೀಣಾಭಿವೃದ್ಧಿ ಕೇಂದ್ರ ಅಡ್ಯಾರ್ ಪದವು ವತಿಯಿಂದ ಇದರ 22 ನೇ ವಾರ್ಷಿಕೋತ್ಸವದ ಅಂಗವಾಗಿ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ರವಿವಾರ ವೃಕ್ಷರಾಜ ಸಭಾ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಉತ್ತರ ವಿಧಾನನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ, ವೈ ಚಾಲನೆ ನೀಡಿ, ಯಾವುದೇ ಸಂಘಟನೆಗಳು ಸಮಾಜಕ್ಕೆ ನೆರವಾದಾಗ ,ಜನರ ಕಷ್ಟಗಳಿಗೆ ಸ್ಪಂದಿಸಿದಾಗ ಜನರ ವಿಶ್ವಾಸ, ಗೌರವಕ್ಕೆ ಪಾತ್ರವಾಗುತ್ತದೆ .ಸಮಾಜ ಸೇವೆಯ ಮೂಲಕ ಮನೆ ಮಾತಾದ ಸಂಘಟನೆಯು ಇದೀಗ ರಕ್ತದಾನದ ಮೂಲಕ ಜೀವ ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಂಗಳೂರು ಉತ್ತರ ಮಂಡಲ ಯುವ ಮೋರ್ಚಾದ ಕಾರ್ಯದರ್ಶಿಗಳಾದ ಪ್ರಮೋದ್ ,ಕೋಡ್ದಬ್ಬು ಪಂಜುರ್ಲಿ ದೈವಸ್ಥಾನದ ಮೋಹನ್ ಸಾಲ್ಯಾನ್ , ಕೋಟಿ ಗುರಿಕಾರ ,ಜೈ ಆಂಜನೇಯ ರೈಸ್ಲಿಂಗ್ ಸೆಂಟರ್ ನ ಯೋಗ ಶಿಕ್ಷಕರಾದ ಸುಧೀರ್ ,ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಯೋಜಕ್ ಉಲ್ಲಾಸ್ , ವೆನ್ಲಾಕ್ ಆಸ್ಪತ್ರೆಯ ಆಂಟನಿ , ವೈದ್ಯರಾದ ಸೆಲ್ವಿ, ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.