DAKSHINA KANNADA
‘ದೈವ ದೇವರ ಹೆಸರಲ್ಲಿ ಕಲಾವಿದರ ಮೇಲೆ ಹಲ್ಲೆ ದಬ್ಬಾಳಿಕೆ ಸಹಿಸಲ್ಲ ಇದು ಇಲ್ಲೇ ಕೊನೆಯಾಗಬೇಕು’ ಕರಾವಳಿ ಕಲಾವಿದರ ಒಕ್ಕೊರಲ ಎಚ್ಚರಿಕೆ..!
ಮಂಗಳೂರು :ದೈವ ದೇವರ ಹೆಸರಿನಲ್ಲಿ ಕಲಾವಿದರ ಮೇಲೆ ಹಲ್ಲೆ ದಬ್ಬಾಳಿಕೆಗಳನ್ನು ಯಾವೋತ್ತು ಸಹಿಸಲ್ಲ. ಇದು ಇಲ್ಲೇ ಕೊನೆಯಾಗಬೇಕು. ಮುಂದೆ ಇದು ಪುನರಾವರ್ತನೆ ಆದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕರಾವಳಿಯ ಕಲಾವಿದರು, ನಿರ್ಮಾಪಕರು ಮತ್ತು ತಂತ್ರಜ್ಷರು ಎಚ್ಚರಿಕೆ ನೀಡಿದ್ದಾರೆ.
ನಾಟಕ, ಯಕ್ಷಗಾನ , ಸಿನಿಮಾ ಕ್ಷೇತ್ರಗಳ ಕಲಾವಿದರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯವನ್ನು ಖಂಡಿಸಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಕಲಾವಿದರು ಡಾನ್ ಬಾಸ್ಕೋ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಶಾಂತಿಯುತ ಕಾಲ್ನಡಿಗೆ ಜಾಥಾ ಆಯೋಜಿಸಿದ್ದರು. ಆದ್ರೆ ಚುನಾವಣಾ ನೀತಿಸಂಹಿತೆ ಜಾರಿ ಇರೋದರಿಂದ ಜಿಲ್ಲಾಡಳಿತದಿಂದ ಅನುಮತಿ ದೊರಕದ ಕಾರಣ ಕಲಾವಿದರು ಡೋನ್ ಬೋಸ್ಕೋ ಹಾಲ್ ನಲ್ಲಿ ಎಲ್ಲಾ ಕಲಾವಿದರ ಅಭಿಪ್ರಾಯ ಸಂಗ್ರಹಿಸಿ , ಮುಂದೆ ಯಾವ ರೀತಿ ಸಮಸ್ಯೆ ಬಗೆಹರಿಸಬೇಕೆಂಬುದರ ವಿಚಾರದಲ್ಲಿ ಚರ್ಚೆ ನಡೆಸಿ ಸಹಿ ಸಂಗ್ರಹ ಮಾಡಿ ಬಳಿಕ ಆಯ್ದ ಕೆಲವು ಕಲಾವಿದರು ದ.ಕ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು. ತುಳು ನಾಟಕ ಕಲಾವಿದರ ಒಕ್ಕೂಟ, ಜಿಲ್ಲಾ ರಂಗ ಸಮ್ಮಿಲನ ವೇದಿಕೆ, ಕೋಸ್ಟಲ್ ವುಡ್ ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟ ಮತ್ತು ಯಕ್ಷಗಾನ ಕಲಾವಿದರು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಲ್ ಬೈಲ್, ಸರಪಾಡಿ ಅಶೋಕ್ ಶೆಟ್ಟಿ , ಪ್ರಕಾಶ್ ತುಮಿನಾಡು, ಲಯನ್ ಕಿಶೋರ್ ಡಿ ಶೆಟ್ಟಿ, ಮತ್ತಿತರ ಕಲಾವಿದರು ಭಾಗವಹಿಸಿ ಮಾತನಾಡಿ ದೈವ ದೇವರ ಹೆಸರಿನಲ್ಲಿ ಕಲಾವಿದರ ಮೇಲೆ ಹಲ್ಲೆ ದಬ್ಬಾಳಿಕೆಗಳನ್ನು ಯಾವೋತ್ತು ಸಹಿಸಲ್ಲ. ಇದು ಇಲ್ಲೇ ಕೊನೆಯಾಗಬೇಕು. ಮುಂದೆ ಇದು ಪುನರಾವರ್ತನೆ ಆದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು..!
You must be logged in to post a comment Login