LATEST NEWS
“ಕರ್ನಾಟಕದ ವಿಕಾಸ ಜೋಡಿ ಯಡ್ಯೂರಪ್ಪ ಮೋದಿ” ವಿಧಾನಸಭೆ ಚುನಾವಣೆ ಬಿಜೆಪಿ ಘೋಷ ವಾಕ್ಯ

” ಕರ್ನಾಟಕದ ವಿಕಾಸ ಜೋಡಿ ಯಡ್ಯೂರಪ್ಪ ಮೋದಿ” ವಿಧಾನಸಭೆ ಚುನಾವಣೆ ಬಿಜೆಪಿ ಘೋಷ ವಾಕ್ಯ
ಉಡುಪಿ ಜನವರಿ 23: ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಬಿಜೆಪಿಯ ಘೋಷ ವಾಕ್ಯವನ್ನು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಿಸಿದ್ದಾರೆ.
” ಕರ್ನಾಟಕದ ವಿಕಾಸ ಜೋಡಿ ಯಡ್ಯೂರಪ್ಪ ಮೋದಿ” ಎಂಬ ಸಾಲುಗಳಿರುವ ಈ ಘೋಷ ವಾಕ್ಯ ಮುಂದಿನ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಘೋಷ ವಾಕ್ಯವಾಗಲಿದೆ.

ಇಂದು ಉಡುಪಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಇದು ಮಹತ್ವದ ಚುನಾವಣೆ, ನೂರು ದಿನಗಳ ಬಳಿಕ ಕರ್ನಾಟಕ ಕಾಂಗ್ರೇಸ್ ಮುಕ್ತವಾಗಲಿದೆ ಎಂದರು. ಕರ್ನಾಟಕ ಚುನಾವಣೆ ಎರಡು ಸಂಸ್ಕೃತಿಗಳ ಸಂಘರ್ಷವಾಗಿದ್ದು, ಅಹಿಂದ ಅಂದಿದ್ರು ಸಿದ್ದರಾಮಯ್ಯ.ಆದ್ರೆ ಭೃಷ್ಟಾಚಾರ ಬಿಟ್ಟು ಏನೂ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಆರ್. ಎಸ್. ಎಸ್ ಕಾರ್ಯಕರ್ತ ರ ಕೊಲೆಯಾಗ್ತಿದೆ, ಆದರೆ ಕಾಂಗ್ರೇಸ್ ಸರ್ಕಾರ ಮಾತ್ರ ಪಿಎಫ್ ಐ ವಿರುದ್ದದ ಕೇಸಗಳನ್ನು ವಾಪಾಸು ಪಡೆಯುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಭಯೋತ್ಪಾದಕ ರ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಾರೆ ಆದರೆ ವಿವೇಕಾನಂದ ಜಯಂತಿಯನ್ನು ಆಚರಣೆ ಮಾಡಿಲ್ಲ ಎಂದು ಆರೋಪಿಸಿದರು.