Connect with us

DAKSHINA KANNADA

ಚುನಾವಣೆ ವೇಳೆ ಕೇಸರಿ ಶಾಲು ಹಾಕಿ ಹಿಂದೂಗಳ ಪರವಾಗಿ ನಿಲ್ಲುತ್ತೇನೆ ಎಂದ ಶಾಸಕ ವಕ್ಫ್ ಕಾಯಿದೆ ವಿರೋಧಿಸುತ್ತಿರುವುದು ವಿಪರ್ಯಾಸ

ಪುತ್ತೂರು ಎಪ್ರಿಲ್ 18: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ ತಿದ್ದುಪಡಿ ವಿದೇಯಕ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಕಾಂಗ್ರೇಸ್ ಪ್ರಾಯೋಜಿತ ಎಂದು ಬಿಜೆಪಿ ಆರೋಪಿಸಿದೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಅರುಣ್.ಜಿ.ಶೇಟ್ ವಕ್ಫ್ ತಿದ್ದುಪಡಿ ವಿಧೇಯಕ ಜಾರಿಗೆ ಬಂದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ದೇಶದಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ ಎಂದು ಆರೋಪಿಸಿದ ಅವರು ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಕ್ಫ್ ಹೆಸರಲ್ಲಿದ್ದರೂ, ಅದರ ಲಾಭ ಮಾತ್ರ ಮುಸ್ಲಿಂ ಸಮಾಜದ ಬಡವರಿಗೆ ತಲುಪುತ್ತಿಲ್ಲ.


ಕೇವಲ ರಾಜಕೀಯ ಕುಳಗಳ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಈ ವಕ್ಫ್ ನ ಲಾಭ ಸಿಗುತ್ತಿದೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ‌ ನೇತ್ರತ್ವದ ಕೇಂದ್ರ ಸರಕಾರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಡ ಮುಸ್ಲಿಮರ ಪರವಾಗಿ ನಿಂತಿದ್ದಾರೆ ಎಂದರು. ವಕ್ಫ್ ಕಾಯಿದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಬಿಡಯವುದಿಲ್ಲ ಎಂದು ಹೇಳಿಕೆ ನೀಡಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ವಾಗ್ದಾಳಿ ನಡೆಸಿದ ಅವರು ಚುನಾವಣೆ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿ ಹಿಂದೂಗಳ ಪರವಾಗಿ ನಿಲ್ಲುತ್ತೇನೆ ಎಂದ ಶಾಸಕರು ಇಂದು ಹಿಂದೂಗಳ ವಿರುದ್ಧವಾಗಿರುವ ಹಳೆಯ ವಕ್ಫ್ ಕಾಯ್ದೆಗೆ ಬೆಂಬಲ ಸೂಚಿಸುತ್ತಿರುವುದು ವಿಪರ್ಯಾಸವಾಗಿದೆ.

ಅದೆಷ್ಟೋ ಕೃಷಿಭೂಮಿಗಳನ್ನು, ದೇವಸ್ಥಾನಗಳನ್ನು 2013 ರ ವಕ್ಫ್ ಕಾಯ್ದೆ ಬಳಸಿ ವಶಪಡಿಸಿಕೊಳ್ಳಲು ಪ್ರಯತ್ನ ಸಾಗಿದ್ದು, ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರಕಾರ ಈ ಹೊಸ ತಿದ್ದುಪಡಿಯನ್ನು ತಂದಿದೆ. ಆದರೆ ಈ ಬಗ್ಗೆ ಮಾಹಿತಿಯನ್ನೇ ತಿಳಿಯದ ಶಾಸಕರು ಹಳೆಯ ವಕ್ಫ್ ನಿಯಮದ ಪರವಾಗಿ ಮಾತನಾಡುತ್ತಿದ್ದಾರೆ. ತಿದ್ದುಪಡಿ ಬೆಂಬಲಿಸಿ ಹಲವು ಮುಸ್ಲಿಂ ಸಮುದಾಯ ಕೇಂದ್ರ ಸರಕಾರಕ್ಕೆ ಧನ್ಯವಾದ‌ ತಿಳಿಸಿದ್ದು, ಕಾಂಗ್ರೇಸ್ ಮಾತ್ರ‌ ತನ್ನ ಓಟ್ ಬ್ಯಾಂಕ್ ನಷ್ಟವಾಗುತ್ತದೆ ಎನ್ನುವ ಕಾರಣದಿಂದ ದೇಶದೆಲ್ಲೆಡೆ ಕಾಯ್ದೆಯ ವಿರುದ್ಧ ಸುಳ್ಳು ಪ್ರಚಾರಗಳನ್ನು ಹರಡುತ್ತಿದೆ. ಇಂದು ದೇಶದಲ್ಲಿ ನಡೆಯುತ್ತಿರೋದು ಕಾಂಗ್ರೆಸ್ ಪ್ರೇರಿತ ಪ್ರತಿಭಟನೆಗಳಾಗಿವೆ ಎಂದು ಅವರು ಆರೋಪಿಸಿದರು.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *