DAKSHINA KANNADA
ಬಿಜೆಪಿ, ಸಂಘಪರಿವಾರ ಮಾಡುತ್ತಿರುವ ಪ್ರತಿಭಟನೆ ರಾಜಕೀಯ ಡೊಂಬರಾಟ: ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ವಾಗ್ದಾಳಿ
ಪುತ್ತೂರು, ಅಗಸ್ಟ್ 17: ಪುತ್ತೂರಿನಲ್ಲಿ ಸ್ವಾತಂತ್ರ್ಯ ರಥದಲ್ಲಿದ್ದ ವೀರ ಸಾವರ್ಕರ್ ಚಿತ್ರಕ್ಕೆ ಅಡ್ಡಿಪಡಿಸಿದ ಎಸ್.ಡಿ.ಪಿ.ಐ ಘಟನೆಯನ್ನು ಖಂಡಿಸಿ ಬಿಜೆಪಿ, ಸಂಘಪರಿವಾರ ಮಾಡುತ್ತಿರುವ ಪ್ರತಿಭಟನೆ ರಾಜಕೀಯ ಡೊಂಬರಾಟ ಎಂದು ಹಿಂದೂ ಮಹಾಸಭಾ ಆರೋಪ ಮಾಡಿದೆ.
ಸಾವರ್ಕರ್, ನಾಥುರಾಮ್ ಗೋಡ್ಸೆಯನ್ನು ಒಪ್ಪದ ಬಿಜೆಪಿಯಿಂದ ಇದೀಗ ಪ್ರತಿಭಟನೆಯ ನಾಟಕ ಮಾಡುತ್ತಿದೆ. ಟಿಪ್ಪು ಜಯಂತಿಯನ್ನು ಆಚರಿಸಿದ ಬಿಜೆಪಿ ನಾಯಕರು ಪುತ್ತೂರಿನ್ನಲ್ಲಾದ ಘಟನೆಯನ್ನು ಖಂಡಿಸುತ್ತಿದ್ದಾರೆ ಇಂಥ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ.
ಚುನಾವಣೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜದ ಹಾದಿ ತಪ್ಪಿಸುವ ಹುನ್ನಾರ ಇದಾಗಿದೆ. ಅಧಿಕಾರಕ್ಕಾಗಿ ಎಸ್‌ಡಿಪಿಐ ಪಕ್ಷದ ಜೊತೆ ಹೊಂದಾಣಿಕೆ ಮಾಡಿದವರಿಂದ ಇದೀಗ ಪ್ರತಿಭಟನೆಯ ನಾಟಕ ನಡೆಯುತ್ತಿದೆ, ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ SDPI,PFI ನಿಶೇಧಿಸಿ ಎಂದಿದ್ದರು, ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ವಿಚಾರವನ್ನೇ ಮರೆತಿದ್ದಾರೆ.
ಕೇಂದ್ರ ಹಾಗು ರಾಜ್ಯದಲ್ಲಿ ನೀವೇ ಅಧಿಕಾರದಲ್ಲಿ ಇದ್ದೀರಾ, ತಾಕತ್ತಿದ್ದರೆ ಎರಡೂ ಸಂಘಟನೆಗಳನ್ನು ನಿಶೇಧಿಸಿ. ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಸ್ಪರ್ಧಿಸಲಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ಠೇವಣಿ ಕಳೆದುಕೊಳ್ಳುವ ದಿನ ಎದುರಾಗಲಿದೆ. ಹಿಂದೂ ರಾಷ್ಟ್ರ ನಿರ್ಮಾಣ ಹಿಂದೂ ಮಹಾಸಭಾದ ಉದ್ಧೇಶ ಎಂದು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಸವಾಲು ಹಾಕಿದ್ದಾರೆ.