LATEST NEWS
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭವಿಷ್ಯ
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭವಿಷ್ಯ
ಮಂಗಳೂರು, ಮಾರ್ಚ್ 25 : ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಬಗ್ಗೆ ಆಲೋಚಿಸುತ್ತಿಲ್ಲ. ಅಭಿವೃದ್ದಿಯ ಯಾವುದೇ ಅಜೆಂಡ ಅವರ ಬಳಿ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಮಂಗಳೂರು ಭೇಟಿ ನೀಡಿದ ಕೇಂದ್ರ ಸಚಿವವರು ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಬಗ್ಗೆ ಆಲೋಚಿಸಿಲ್ಲ.
ಸಮಾಜವನ್ನು ವಿಭಜಿಸುವ ಕೆಲಸ ಮಾತ್ರ ಕಾಂಗ್ರೆಸ್ ಮಾಡುತ್ತಿದೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ ಎಂದು ಆರೋಪಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಭಿವೃದ್ಧಿಯ ಅಜೆಂಡ ಇದೆ. ಮುಂಬರುವ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ. ಈ ಬಾರಿ ಜನರು ನಮ್ಮ ನಾಯಕ ಯಡಿಯೂರಪ್ಪ ರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಪೆಟ್ರೋಲಿಯಂ ನ್ನು ಜಿಎಸ್ ಟಿ ವ್ಯಾಪ್ತಿಯಲ್ಲಿ ಬರಬೇಕೆಂದು ನನ್ನ ಬಲವಾದ ಆಗ್ರಹವಾಗಿದೆ.
ಈ ನಿಟ್ಟಿನಲ್ಲಿ ಪ್ರಕ್ರೀಯೆಗಳು ನಡೆಯುತ್ತಿದ್ದು, ಈ ಬಗ್ಗೆ ಜಿ ಎಸ್ ಟಿ ಸಮಿತಿಗೆ ಮನವರಿಕೆ ಮಾಡುತ್ತಿದ್ದೇನೆ ಎಂದ ಅವರು ಗ್ರಾಹಕರಿಗೆ ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಇದರಿಂದ ಭಾರಿ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಎಂ ಆರ್ ಪಿ ಎಲ್ ನಿಂದ ಪರಿಸರ ಮಾಲೀನ್ಯ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಎಂ ಆರ್ ಪಿ ಎಲ್ ಪರಿಸರ ಸ್ನೇಹಿ ಕೈಗಾರಿಕೆಯಾಗಿದೆ.
ಎಂ ಆರ್ ಪಿ ಎಲ್ ಮತ್ತು ಓ ಎಂ ಪಿ ಎಲ್ ವಿಲೀನ ಪ್ರಕ್ರೀಯೆ ಅಂತಿಮಹಂತದಲ್ಲಿದೆ.
ಅದಕ್ಕಾಗಿ ಭೂ ಸ್ವಾಧೀನ ಪ್ರಕ್ರೀಯೆ ಹಂತದಲ್ಲಿದೆ.
ಇದರ ಸಂಪೂರ್ಣ ವಿಸ್ತರಣೆಯ ಕಾರ್ಯ ನಡೆದ ನಂತರ ಸಮುದ್ರ ನೀರು ಬಳಕೆ ಮಾಡಲಾಗುವುದು ಎಂದು ಹೇಳಿದರು.
2018 ರೊಳಗೆ ಕೊಚ್ಚಿಯಿಂದ ಮಂಗಳೂರು ಗೆ ಗ್ಯಾಸ್ ಕನೆಕ್ಸನ್ ಕಾರ್ಯ ಪೂರ್ಣಗೊಳ್ಳಲಿದೆ.
ಕರ್ನಾಟಕ ಕೆಲವು ತಿಂಗಳಲ್ಲಿ ಹೊಗೆ ಮುಕ್ತವಾಗಲಿದೆ.
ನಮ್ಮ ಸರಕಾರ ಯೋಜನೆ ಮೂಲಕ ಹೊಗೆ ಮುಕ್ತ ಕರ್ನಾಟಕ ನಿರ್ಮಿಸಲಿದೆ.
ಎಲ್ಲ ಜನರು ಎಲ್ ಪಿ ಜಿ ಬಳಕೆ ಮಾಡುವುದರೊಂದಿಗೆ ರಾಜ್ಯದಲ್ಲಿ ಹೊಗೆ ಮುಕ್ತವಾಗಲಿದೆ.
ಎಂದು ಮಾಹಿತಿ ನೀಡಿದರು.