DAKSHINA KANNADA
ರೈತರ ಜಮೀನಿಗೆ ವಕ್ಘ್ ಬೋರ್ಡ್ ನೋಟೀಸ್ ನೀಡಿದ ಸರ್ಕಾರ ಕ್ರಮಕ್ಕೆ ಖಂಡನೆ,ಪುತ್ತೂರಿನಲ್ಲಿ BJP ಪ್ರತಿಭಟನೆ
ಪುತ್ತೂರು : ರೈತರ ಜಮೀನಿಗೆ ವಕ್ಘ್ ಬೋರ್ಡ್ ನೋಟೀಸ್ ನೀಡಿರುವ ಸರ್ಕಾರ ಕ್ರಮವನ್ನು ಖಂಡಿಸಿ ಪುತ್ತೂರು BJP ಘಟಕದಿಂದ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪುತ್ತೂರು ದರ್ಬೆ ವೃತ್ತದ ಬಳಿ ಸೇರಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸರ್ಕಾರದ ವಿರುದ್ದ ಧಿಕಾರ ಕೂಗಿದರು. ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿ ಸರಕಾರ ಮತಬ್ಯಾಂಕ್ ಗಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಆಪ್ತ ಜಮೀರ್ ಅಹಮ್ಮದ್ ಮೂಲಕ ಈ ಕೆಲಸ ಮಾಡುತ್ತಿದ್ದಾರೆ. ರಾಜ್ಯವನ್ನಾಳಿದ ಇತರೆ ಯಾವ ಪಕ್ಷಗಳೂ ಈ ರೀತಿಯ ಕೆಲಸ ಮಾಡಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳ ಮೂಲಕವೇ ಈ ಕೆಲಸ ಮಾಡಿಸುತ್ತಿರುವುದು ಆತಂಕಕಾರಿ ಯಾಗಿದ್ದು ಮುಂದೆ ಬಿಜಾಪುರದ ಗೋಲ ಗುಂಬಸ್, ಬೆಂಗಳೂರಿನ ವಿಧಾನಸಭೆಗೂ ನೋಟೀಸ್ ಬರಬಹುದು ಎಂದು ರಾಜ್ಯ ಸರಕಾರದ ವಿರುದ್ಧ ಸಂಜೀವ ಮಠಂದೂರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ…