DAKSHINA KANNADA
ಬೇಗ್ ವಿರುದ್ಧ ಬಿಜೆಪಿ ಆಕ್ರೋಶ, ರಸ್ತೆ ತಡೆ ನಡೆಸಿ ಪ್ರದರ್ಶಿಸಿತು ರೋಷ

ಬೇಗ್ ವಿರುದ್ಧ ಬಿಜೆಪಿ ಆಕ್ರೋಶ, ರಸ್ತೆ ತಡೆ ನಡೆಸಿ ಪ್ರದರ್ಶಿಸಿತು ರೋಷ
ಮಂಗಳೂರು,ಅಕ್ಟೋಬರ್ 16: ಪ್ರದಾನಿ ನರೇಂದ್ರ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.
ಪಿವಿಎಸ್ ಕಛೇರಿ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸಚಿವ ರೋಷನ್ ಬೇಗ್ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಯನ್ನು ತೂಗಿದ ಬಿಜೆಪಿ ಕಾರ್ಯಕರ್ತರು ರೋಷನ್ ಬೇಗ್ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೋಲೀಸರು ಬಳಿಕ ಬಂಧಿಸಿದರು. ಬಿಜಿಪಿ ಜಿಲ್ಲಾಧ್ಯಕ ಸಂಜೀವ ಮಠಂದೂರು, ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಸೇರಿದಂತೆ ಹಲವು ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿನ್ನೆಯಷ್ಟೇ ವಿಧಾನ ಪರಿಷತ್ ಮುಖ್ಯಸಚೇತಕ ಹಾಗೂ ಶಾಸಕ ಮೊಯಿದೀನ್ ಬಾವ ಗುರುಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದಾಗ ಅವರನ್ನು ಬಂಧಿಸದ ಪೋಲೀಸರು ಇದೀಗ ಪ್ರತಿಭಟನೆ ನಡೆಸುವ ಹಕ್ಕನ್ನೂ ಕಸಿಯುತ್ತಿದ್ದಾರೆಂದು ಆರೋಪಿಸಿದರು
