DAKSHINA KANNADA
ದೇಯಿ ಬೈದೆದಿ ಹೆಸರಲ್ಲಿ ರಾಜಕೀಯ-ಕಾಂಗ್ರೇಸ್ ಆರೋಪ

ಪುತ್ತೂರು,ಸೆಪ್ಟಂಬರ್ 14:ದೇಯಿಬೈದೆದಿ ಪುತ್ಥಳಿಗೆ ಅವಮಾನ ಮಾಡಿದ ವಿಚಾರವನ್ನು ಮುಂದಿಟ್ಟು ಬಿಜೆಪಿ ಹಾಗೂ ಸಂಘಪರಿವಾರ ರಾಜಕೀಯ ನಡೆಸುತ್ತಿದೆ ಎಂದು ಕಾಂಗ್ರೇಸ್ ಪಕ್ಷದ ಹಿಂದುಳಿದ ವರ್ಗ ಆರೋಪಿಸಿದೆ.ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯನ್ನು ಮಾತನಾಡಿದ ಹಿಂದುಳಿದ ವರ್ಗದ ಸದಸ್ಯ ಉಲ್ಲಾಸ್ ಕೋಟ್ಯಾನ್ ದೇಯಿ ಬೈದೆದಿಯ ಪುತ್ಥಳಿಯನ್ನು ಅವಮಾನ ಮಾಡಿದ ಘಟನೆ ಖಂಡನೀಯವಾಗಿದೆ. ಆರೋಪಿಯನ್ನು ಈಗಾಗಲೇ ಪೋಲೀಸರು ಬಂಧಿಸಿದ್ದಾರೆ. ಕೇವಲ ಆರೋಪಿಯನ್ನು ಮಾತ್ರವಲ್ಲದೆ, ಆತನ ಜೊತೆಗೆ ಸಹಕರಿಸಿದವರನ್ನೂ ಪೋಲೀಸರು ಬಂಧಿಸಬೇಕಿದೆ ಎಂದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಸಂಘಪರಿವಾರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು ಕೋಟಿ-ಚೆನ್ನಯರ ವಿಷಯದಲ್ಲಿ ರಾಜಕೀಯ ಸಲ್ಲದು ಎಂದರು. ಅರಣ್ಯ ಇಲಾಖೆ ನಿರ್ಮಿಸಿದ ದೇಯಿ ಬೈದೆದಿ ಔಷಧೀಯ ವನದಲ್ಲಿ ನಿರ್ಮಿಸಿರುವ ದೇಯಿ ಬೈದೆದಿ ಪುತ್ಥಳಿ ಪ್ರತಿಷ್ಟಾಪಿಸಿದ ಪುತ್ಥಳಿಯಲ್ಲ ಎಂದು ಸ್ಪಷ್ಟನೆ ನೀಡಿದ ಅವರು ಇದಕ್ಕೆ ಶುದ್ದೀಕರಣ ನಡೆಸುತ್ತೇವೆ ಎನ್ನುವುದು ಹಿಂದೂ ಸಂಘಟನೆಗಳ ಕೇವಲ ನಾಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು.