LATEST NEWS
ಕರಾವಳಿಯಲ್ಲಿ ಬಿಜೆಪಿಯ ಕರ್ನಾಟಕ ಸುರಕ್ಷಾ ಯಾತ್ರೆ
ಕರಾವಳಿಯಲ್ಲಿ ಬಿಜೆಪಿಯ ಕರ್ನಾಟಕ ಸುರಕ್ಷಾ ಯಾತ್ರೆ
ಮಂಗಳೂರು ಫೆಬ್ರವರಿ 15: ಒಂದು ಸಮಯ ಬಿಜೆಪಿಯ ಭದ್ರಕೋಟೆಯಾಗಿದ್ದ ಕರಾವಳಿಯಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ಕೈ ಯಲ್ಲಿದ್ದರೆ ಸುಳ್ಯ ಕ್ಷೇತ್ರ ಮಾತ್ರ ಬಿಜೆಪಿ ವಶದಲ್ಲಿದೆ. ಇನ್ನು ಉಡುಪಿ ಜಿಲ್ಲೆಯ ಚಿತ್ರಣ ಕೂಡ ಇದೇ ಆಗಿದೆ. ಇಲ್ಲಿಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರ ಬಿಜೆಪಿ ವಶದಲ್ಲಿದ್ದರೆ, ಕಾರ್ಕಳ ಮಾತ್ರ ಬಿಜೆಪಿ ಯ ಹಿಡಿತ ದಲ್ಲಿದೆ.
ಈ ಹಿನ್ನಲೆಯಲ್ಲಿ ಈ ಬಾರಿ ಮತ್ತೆ ತಮ್ಮ ಕ್ಷೇತ್ರಗಳಲ್ಲಿ ಮರಳಿ ಪಡೆಯಲು ಬಿಜೆಪಿ ಕಸರತ್ತು ಆರಂಭಿಸಿದೆ. ಬಿಜೆಪಿ ನಾಯಕರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ ಕಾರ್ಯಕರ್ತರನ್ನು ಹುರುದುಂಬಿಸುತ್ತಿದೆ. ಇದರ ಭಾಗವಾಗಿ ಮಾರ್ಚ್ ಮೊದಲವಾರದಲ್ಲಿ 4 ಮಂದಿ ಸಂಸದರ ನೇತೃತ್ವದಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಪಾದಯಾತ್ರೆ ಸಡೆಸಲು ಯೋಜನೆ ರೂಪಿಸಿದೆ.
ಹಿಂದು ಕಾರ್ಯಕರ್ತರ ಹತ್ಯೆ ಖಂಡಿಸಿ ಕೇರಳದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯ ಮಾದರಿಯಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಕರ್ನಾಟಕ ಸುರಕ್ಷಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ 6 ರಂದು ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಬೃಹತ್ ಸಮಾವೇಶದಲ್ಲಿ ಉತ್ತರ ಪ್ರದೆಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ಸುರಕ್ಷಾ ಯಾತ್ರೆ ಮಾರ್ಚ್ 3 ರಂದು ಅಂಕೋಲದಿಂದ ಚಾಲನೆ ದೊರೆಯಲಿದ್ದು, ಇನ್ನೊಂದು ಕಡೆ ಕೊಡಗಿನ ಕುಶಾಲನಗರ ಚಾಲನೆ ದೊರೆಯಲಿದೆ. ಕೊಡಗಿನಿಂದ ಸಂಸದ ಪ್ರತಾಪ್ ಸಿಂಹ, ಚಿಕ್ಕಮಂಗಳೂರಿ ನಿಂದ ಸಂಸದೆ ಶೋಭಾ ಕರದ್ಲಾಜೆ, ಉತ್ತರಕನ್ನಡ ಜಿಲ್ಲೆಯ ಅಂಕೋಲಾದಿಂದ ಸಂಸದ ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಏಕಕಾಲಕ್ಕೆ ಮಾರ್ಚ 3 ರಂದು ಪಾದಯಾತ್ರೆ ಆರಂಭಿಸಲಿದ್ದಾರೆ ಎಂದು ಹೇಳಲಾಗಿದೆ.
ಈ ಪಾದಯಾತ್ರೆ ಮಾರ್ಚ್ 6 ರಂದು ಮಂಗಳೂರಿನ ಸುರತ್ಕಲ್ ನಲ್ಲಿ ಸಂಪನ್ನ ಗೊಳ್ಳಲಿದ್ದು. ಈ ಪಾದಯಾತ್ರೆಯ ಸಮಾರೋಪದ ಭಾಗ ವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳು ಕಮಲ ಮುಖಂಡರು ಮುಂದಾಗಿದ್ದಾರೆ.