LATEST NEWS
ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷಕ್ಕೆ ಬನ್ನಿ ಎಂದು ಮುಕ್ತ ಆಹ್ವಾನ ಕೊಟ್ಟ ಬಿಜೆಪಿ

ಮಂಗಳೂರು ಮಾರ್ಚ್ 02: ಬಿಜೆಪಿ ವಿರುದ್ದ ಬಂಡಾಯ ಎದ್ದಿರುವ ಪುತ್ತಿಲ ಪರಿವಾರ ಅರುಣ್ ಕುಮಾರ್ ಪುತ್ತಿಲ ಅವರು ಸೇರಿದಂತೆ ಇತರರು ಬಿಜೆಪಿ ಸೇರುವ ಬಗ್ಗೆ ವಿಶೇಷವಾದ ಚರ್ಚೆ ನಡೆಯುತ್ತಿದೆ ಪುತ್ತಿಲ ಅವರನ್ನು ಬಿಜೆಪಿ ಸೇರ್ಪಡೆಗೆ ಈಗ ಮುಕ್ತವಾಗಿ ಆಹ್ವಾನವನ್ನು ನೀಡುತ್ತಿದ್ದೇನೆ ಎಂದು ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪುಲ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅರುಣ್ ಪುತ್ತಿಲ ಅವರ ಕರೆಗೆ ನಾವು ಸ್ಪಂದನೆ ನೀಡಲಿಲ್ಲಾ ಸ್ಥಳೀಯ ಮುಖಂಡರು ಅವರನ್ನು ದೂರ ಇರಿಸುವ ಪ್ರಯತ್ನ ನಡೀತಿದೆ ಅನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದರು.

ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆ ಕುರಿತಂತೆ ಅವರೊಟ್ಟಿಗೆ ರಾಜ್ಯಾಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಮತ್ತು ಹಿರಿಯರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ ಎಂದರು. ಅರುಣ್ ಕುಮಾರ್ ಪುತ್ತಿಲ ಅವರ ಜೊತೆ ಮಾತುಕತೆಯಲ್ಲಿ ನಾವು ಯಾವುದೇ ಕಾಲಹರಣ ಮಾಡಿಲ್ಲ, ಅವರು ಬಿಜೆಪಿ ಸೇರ್ಪಡೆ ಸೇರಿದಂತೆ ಪುತ್ತೂರಿನ ನಾಯಕರು ಸೇರಿದಂತೆ ರಾಜ್ಯದ ನಾಯಕರು ಮುಕ್ತವಾದ ಆಹ್ವಾನವನ್ನು ಕೊಟ್ಟಿದ್ದಾರೆ ಎಂದರು.
ಅರುಣ್ ಕುಮಾರ್ ಪುತ್ತಿಲ ಅವರು ಯಾಕೆ ಬಿಜೆಪಿ ಸೇರ್ಪಡೆಯಾಗಿಲ್ಲ ಎನ್ನುವುದಕ್ಕೆ ಅವರೇ ಉತ್ತರ ಕೋಡಬೇಕು ಎಂದು ಸತೀಶ್ ಕುಂಪಲ ತಿಳಿಸಿದರು. ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದು ರಾಜ್ಯಾಧ್ಯಕ್ಷರೇ ತಿಳಿಸಿದ್ದಾರೆ. ಇವತ್ತಿಗೂ ಅರುಣ್ ಕುಮಾರ್ ಪುತ್ತಿಲ ಅವರ ಜೊತೆ ಮಾತುಕತೆ ಹಂತದಲ್ಲಿ ಪಕ್ಷ ಇದ್ದು, ಅರುಣ್ ಕುಮಾರ್ ಪುತ್ತಿಲ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವ ವಿಶ್ವಾಸದಲ್ಲಿದ್ದೇವೆ ಎಂದು ಹೇಳಿದರು.