LATEST NEWS
ಫಾಸ್ಟ್ ಟ್ಯಾಗ್ ಕಡ್ಡಾಯ ವಿರುದ್ದ ಅಸಮಧಾನ ಹೊರ ಹಾಕಿದ ಬಿಜೆಪಿ ಶಾಸಕ ರಘುಪತಿ ಭಟ್
ಉಡುಪಿ ಡಿಸೆಂಬರ್ 31: ದೇಶದಾದ್ಯಂತ ಜನವರಿ 1 ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆ ಇನ್ನುಮುಂದೆ ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ಯಾವುದೇ ರೀತಿಯ ರಿಯಾಯಿತಿ ಇನ್ನುಮುಂದೆ ಸಿಗುವುದಿಲ್ಲ. ಈ ಹಿನ್ನಲೆ ಈಗಾಗಲೇ ಕೇಂದ್ರ ಸರಕಾರದ ಈ ಆದೇಶದ ವಿರುದ್ದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ಬಿಜೆಪಿಯ ಶಾಸಕರೇ ಕೇಂದ್ರ ಸರಕಾರದ ಆದೇಶದ ವಿರುದ್ದ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ಏಕಾಏಕಿ ಹೆದ್ದಾರಿ ಟೋಲ್ ಗೇಟ್ ಗಳಲ್ಲಿ ನಗದು ಪಾವತಿ ರದ್ದುಗೊಳಿಸಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವುದಕ್ಕೆ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಹೆದ್ದಾರಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿರುವಾಗ ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದು ಸರಿಯಲ್ಲ. ಕುಂದಾಪುರದಲ್ಲಿ ಮೇಲ್ಸೇತುವೆ, ಪಡುಬಿದ್ರಿ ಕಲ್ಸಂಕ ಸೇತುವೆ ಮತ್ತು ಸರ್ವಿಸ್ ರಸ್ತೆ ಗಳು ನಿರ್ಮಾಣ ಆಗದೆ ಸ್ಥಳೀಯರಿಂದ ಹಣ ಪಡೆಯುವುದು ಸರಿಯಲ್ಲ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ಒತ್ತಡ ತರಬಾರದು ಎಂದು ಶಾಸಕರು ತಿಳಿಸಿದ್ದಾರೆ.