Connect with us

LATEST NEWS

ಪಾಕಿಸ್ತಾನ ಪರ ಘೋಷಣೆ – ಮೂವರು ಆರೋಪಿಗಳು ಆರೆಸ್ಟ್

ಪುತ್ತೂರು ಡಿಸೆಂಬರ್ 31: ಗ್ರಾಮಪಂಚಾಯತ್ ಚುನಾವಣೆ ಮತ ಎಣಿಕೆ ಸಂದರ್ಭ ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿಯ ಪಿಲಿಚಂಡಿಕಲ್ಲು, ಕುವೆಟ್ಟು ನಿವಾಸಿಗಳಾದ ಮಹಮ್ಮದ್ ಹರ್ಷದ್ (22), ದಾವೂದ್ (36) ಹಾಗೂ ಇಸಾಕ್ (28) ಬಂಧಿತ ಎಂದು ಗುರುತಿಸಲಾಗಿದೆ.


ನಿನ್ನೆ ಗ್ರಾಮಪಂಚಾಯತ್ ಚುನಾವಣೆಯ ಫಲಿತಾಂಶದ ಸಂದರ್ಭ ಉಜಿರೆಯ ಮತ ಎಣಿಕೆ ಕೇಂದ್ರದ ಎದುರು ಗೆಲುವಿನ ಸಂಭ್ರಮಾಚರಣೆ ವೇಳೆ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಈ ಹಿನ್ನಲೆ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರು ಪಾಕಿಸ್ತಾನ ಪರ ಘೋಷಣೆ ಇರುವ ವಿಡಿಯೋವನ್ನು ಪರಿಶೀಲನೆ ನಡೆಸಿದ್ದು, ಇದೇ ಘಟನೆಗೆ ಸಂಬಂಧಿಸಿದಂತೆ ಇನ್ನೆರಡು ವಿಡಿಯೋ ಕೂಡ ಪೋಲೀಸರಿಗೆ ಲಭ್ಯವಾಗಿದೆ. ಸದ್ಯ ಈ ಎಲ್ಲಾ ವಿಡಿಯೋಗಳನ್ನು ತಾಂತ್ರಿಕ ವಿಶ್ಲೇಷಣೆಗೆ ಪೊಲೀಸರು ಒಳಪಡಿಸಿದ್ದು, ವಿಡಿಯೋ ಸಾಕ್ಷಗಳ ಆಧಾರದಲ್ಲಿ ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ.