DAKSHINA KANNADA
ಸ್ವಾತಂತ್ರ್ಯೋತ್ಸವ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರ ತಡೆ – ಶೀಘ್ರ ಆರೋಪಿಗಳ ಬಂಧನಕ್ಕೆ ಶಾಸಕ ಮಠಂದೂರು ಸೂಚನೆ
ಪುತ್ತೂರು ಅಗಸ್ಟ್ 15: ಸಾವರ್ಕರ್ ಫೋಟೊ ಇದೆ ಎಂದು ಕಬಕ ಗ್ರಾಮುಪಂಚಾಯತ್ ನ ಸ್ವಾತಂತ್ರ್ಯೋತ್ಸವ ರಥಕ್ಕೆ ಅಡ್ಡಿಪಡಿಸಿದ ಎಸ್ ಡಿಪಿಐ ಕಾರ್ಯಕರ್ತರ ವಿರುದ್ದ ಪುತ್ತೂರು ಶಾಸಕ ಸಂಜೀವ ಮಠಂದೂರ ಆಕ್ರೋಶ ವ್ಯಕ್ತಪಡಿಸಿದ್ದು, ಗೃಹಸಚಿವರಿಂದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಸಾವರ್ಕರ್ ಫೋಟೊ ಇದೆ ಎಂದು ಕಬಕ ಗ್ರಾಮುಪಂಚಾಯತ್ ನ ಸ್ವಾತಂತ್ರ್ಯ ರಥಕ್ಕೆ ಎಸ್ ಡಿಪಿಐ ಕಾರ್ಯ ಕರ್ತರು ತಡೆಯೊಡ್ಡಿದ್ದರು, ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಸ್ವಾತಂತ್ರ್ಯೋತ್ಸವ ರಥ ಸಂಚರಿಸಲಿದ್ದು ರಥಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ
ವಿನಯ ಕಲ್ಲೇಗ ಚಾಲನೆ ನೀಡಿದ್ದರು .
ಚಾಲನೆ ನೀಡಿದ ಕೂಡಲೇ ಅಲ್ಲಿಯೇ ಇದ್ದ ಎಸ್ ಡಿಪಿಐ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಸ್ವಾತಂತ್ರ್ಯ ರಥಕ್ಕೆ ತಡೆ ಒಡ್ಡಿದ್ದರು, ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಈ ಹಿನ್ನಲೆ ಘಟನೆ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆಯನ್ನು ಖಂಡಿಸಿದ ಶಾಸಕ ಮಠಂದೂರು, ಇದೊಂದು ಮತೀಯವಾದಿ ಸಂಘಟನೆಗಳ ಕೃತ್ಯವಾಗಿದ್ದು, ಕೇರಳ ಭಾಗದ ಸಂಘಟನೆಗಳು ಕಬಕ ಭಾಗದಲ್ಲಿ ಸಕ್ರಿಯವಾಗಿದ್ದು, ಕಬಕದಲ್ಲಿ ಮತೀಯ ಸಂಘಟನೆಗಳ ಉಪಟಳ ಹೆಚ್ಚುತ್ತಿದ್ದು, ಈ ಕುರಿತಂತೆ ಗೃಹಸಚಿವರಿಂದ ಉನ್ನತ ಮಟ್ಟದ ತನಿಖೆಗೆ ಆಗ್ರಹ ಮಾಡಲಾಗುವು ಎಂದರು.
ಸ್ವಾತಂರ್ತ್ಯ ರಥವನ್ನು ತಡೆದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಅವರನ್ನು ಗಡಿಪಾರು ಮಾಡಬೇಕು ಎಂದು ಪೋಲೀಸರಿಗೆ ಸೂಚನೆ ನೀಡಿದರು. ತಕ್ಷಣವೇ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದರು.