DAKSHINA KANNADA
ಸುಳ್ಯ – ಆಟದಲ್ಲಿ ಧರ್ಮವನ್ನು ಎಳೆದು ತಂದು ಮೈದಾನದಿಂದಲೇ ಕ್ರೈಸ್ತ ಯುವಕನ ಹೊರಗೆ ಕಳಿಸಿದ ಬಿಜೆಪಿ ಮುಖಂಡ
ಸುಳ್ಯ ಜುಲೈ 14: ದೇವಸ್ಥಾನಕ್ಕೆ ಸೇರಿದ ಜಾಗವೊಂದರಲ್ಲಿ ಹಿಂದೂ ಯುವಕರ ಜೊತೆ ಕ್ರಿಕೆಟ್ ಆಡುತ್ತಿದ್ದ ಕ್ರೈಸ್ತ ಧರ್ಮದ ಯುವಕನೊಬ್ಬನನ್ನು ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಮೈದಾನದಿಂದಲೇ ಹೊರಗೆ ಕಳುಹಿಸಿದ ಘಟನೆ ನಡೆದಿದೆ.
ಸುಳ್ಯ ದ ಜಯನಗರದಲ್ಲಿರುವ ಮೊಗೆರ್ಕಳ ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕೆಲವು ಯುವಕರು ಕ್ರಿಕೇಟ್ ಆಟ ಆಡುತ್ತಿದ್ದರು, ಈ ಗುಂಪಿನಲ್ಲಿ ಹಿಂದೂ ಯುವಕರ ಜೊತೆ ಕ್ರೈಸ್ತ ಧರ್ಮದ ಯುವಕನೊಬ್ಬ ಕ್ರಿಕೆಟ್ ಆಡುತ್ತಿದ್ದು, ಇದನ್ನು ಆಕ್ಷೇಪಿಸಿದ ಬಿಜೆಪಿ ಮುಖಂಡ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಗಿರುವ ಪ್ರವೀಣ್ ಎನ್ನುವವರು ಕ್ರಿಕೇಟ್ ಆಟವನ್ನು ತಡೆದ ಕ್ರೈಸ್ತ ಯುವಕನನ್ನು ಮೈದಾನದಿಂದ ಹೊರಗೆ ಕಳುಹಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚರ್ಚ್,ಮಸೀದಿಗಳ ಜಾಗದಲ್ಲಿ ಹಿಂದೂಗಳನ್ನು ಆಡೋಕೆ ಬಿಡ್ತಾರಾ? ಹಿಂದೂಗಳ ಜಾಗದಲ್ಲಿ ಕ್ರೈಸ್ತ ಯುವಕ ಆಡೋದು ಬೇಡ ಎಂದು ಯುವಕರನ್ನು ಬಿಜೆಪಿ ಮುಖಂಡ ಗದರಿಸಿದ್ದಾನೆ, ಅಲ್ಲದೆ ಶಾಸಕರ ಬಳಿ ಕೇಳಿಯೇ ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ ಮುಖಂಡ, ಆದರೆ ಕ್ರಿಕೆಟ್ ಆಡುತ್ತಿದ್ದ ಯುವಕರು ಳೆ ಕ್ರೈಸ್ತ ಯುವಕನ ಪರ ನಿಂತಿದ್ದು, ಬಿಜೆಪಿ ಮುಖಂಡನಿಗೆ ಆಟದಲ್ಲಿ ಧರ್ಮವಿಲ್ಲ ಅಂತಾ ಮನವರಿಕೆ ಯತ್ನಿಸಿದ್ದಾರೆ. ಆದರೆ ಯವಕರ ಮಾತಿಗೆ ಸೊಪ್ಪು ಹಾಕದ ಮುಖಂಡ ಕ್ರೈಸ್ತ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ, ನಾವು ಹಿಂದೂಗಳು ನೋಡಿಕೊಳ್ಳುತ್ತೇವೆ, ನೀನು ಕ್ರೈಸ್ತ ಮೈದಾನದಿಂದ ಹೊರ ನಿಲ್ಲು ಅಂತಾ ಸೂಚಿಸಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಮುಖಂಡ ಪ್ರವೀಣ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.