LATEST NEWS
ಅಮಿತ್ ಶಾ ನಿರ್ದೇಶನದಂತೆ ಬಿಜೆಪಿಗರು ರಾಜ್ಯದಲ್ಲಿ ಗಲಭೆ ನಡೆಸುತ್ತಿದ್ದಾರೆ : ಪ್ರಮೊದ್ ಮಧ್ವರಾಜ್
ಉಡುಪಿ,ಡಿಸೆಂಬರ್ 15 :ಅಮಿತ್ ಶಾ ನಿರ್ದೇಶನದಂತೆ ಬಿಜೆಪಿಗರು ರಾಜ್ಯದಲ್ಲಿ ಗಲಭೆ ನಡೆಸುತ್ತಿದ್ದಾರೆ ಎಂದು ಸಚಿವ ಪ್ರಮೊದ್ ಮಧ್ವರಾಜ್ ಆರೋಪಿಸಿದ್ದಾರೆ. ಹೊನ್ನವರದ ಪರೇಶ್ ಮೇಸ್ತ ಸಾವಿನ ಬಗ್ಗೆ ನಮಗೂ ಅನುಕಂಪವಿದೆ.
ಹೊನ್ನಾವರ ಗಲಭೆ ಹಿಂದಿನ ವಿಚಾರವೂ ತನಿಖೆಯಾಗಬೇಕು.
ಪರೇಶ್ ಸಾವಿನ ಉನ್ನತ ತನಿಖೆಗಾಗಿ ಸರ್ಕಾರ ಇದನ್ನು ಸಿಬಿಐ ಗೆ ವಹಿಸಿದೆ.
ಯಡಿಯೂರಪ್ಪ ಸಮಯದಲ್ಲಿ ಎಷ್ಟು ಕೇಸುಗಳನ್ನು ಸಿಬಿಐ ಗೆ ವಹಿಸಿದ್ದೀರಿ? ಎಂದು ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದರು.
ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮದ್ವರಾಜ್ ಅವರು ರಾಷ್ಟಾಧ್ಯಕ್ಷ ಅಮಿತ್ ಶಾ ಹೇಳಿಕೆಯಂತೆ ಬಿಜೆಪಿಗರು ರಾಜ್ಯದಲ್ಲಿ ಗಲಭೆಗೆ ಮುಂದಾಗಿದ್ದಾರೆ.
ಕೇಂದ್ರದಲ್ಲಿ ಅವರದೇ ಬಿಜೆಪಿ ಸರಕಾರವಿದ್ದರೂ ಮುಖ್ಯಮಂತ್ರಿಗಳು ಹಲವು ಕೇಸುಗಳನ್ನು ಸಿಬಿಐ ಗೆ ವಹಿಸಿದ್ದಾರೆ ಎಂದು ಹೇಳಿದರು.
ಪರೇಶ್ ಮರಣೋತ್ತರ ವರದಿ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಅಪಸ್ವರ ಎತ್ತಿರುವ ವಿಚಾರ ಕುರಿತು ಪ್ರತಿಕ್ರೀಯಿಸಿರುವ ಅವರು ಶೋಭಾ ಕರಂದ್ಲಾಜೆ ಒಬ್ಬರೇ ವಿಶ್ವಾಸಹರ್ತೆಗೆ ಅರ್ಹರೇ?
ನಾನು ಒಬ್ಬ ಮಾತ್ರ ಸರಿಯಿದ್ದೇನೆ, ಇಡೀ ಲೋಕ ಸರಿಯಿಲ್ಲ ಅನ್ನೋ ಭಾವನೆ ಶೋಭಾ ಹೊಂದಿದ್ದಾರೆ.
ಇದು ಸಂಸದೆ ಶೋಭಾರವರ ಮಾನಸಿಕ ಪರಿಸ್ಥಿತಿಯ ಪ್ರತಿಬಿಂಬ.
ಅಂತಹವರು ಜನಪ್ರತಿನಿಧಿಯಾಗಲು ಎಷ್ಟರ ಮಟ್ಟಿಗೆ ಯೋಗ್ಯರು ಎನ್ನುವುದನ್ನು ವಿಮರ್ಶಿಸಲಿ ಎಂದರು.
ಸಂಸದ ಅನಂತ್ ಕುಮಾರ್ ಹೆಗ್ಡೆ ‘ಮುಂದಿದೆ ಮಾರಿಹಬ್ಬ’ ಸ್ಟೇಟಸ್ ವಿಚಾರದಲ್ಲಿ ಪ್ರತಿಕ್ರೀಯೆ ನೀಡಿದ ಪ್ರಮೋದ್ ಮದ್ವರಾಜ್ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆ ಗೆಲುವಿಗಾಗಿ ಗಲಭೆ ಹಬ್ಬಿಸುವ ಯತ್ನವಿದು.
ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಹಿಂಸಾಚಾರ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಮಧ್ವರಾಜ್ ಓರ್ವ ಕೇಂದ್ರ ಸಂಸದನಿಗೆ ಈ ರೀತಿಯ ಹೇಳಿಕೆ ತರವಲ್ಲ.
ಇಂತವರ ಬಗ್ಗೆ ಜನತೆಯೇ ಸರಿಯಾದ ನಿರ್ಧಾರ ತಳೆಯುತ್ತಾರೆ ಎಂದರು.