DAKSHINA KANNADA
ಗುಡ್ಡ ಕುಸಿತ ಸಂಪೂರ್ಣ ಕೊಚ್ಚಿ ಹೋದ ಬಿಸ್ಲೆ ಘಾಟ್ ರಸ್ತೆ
ಗುಡ್ಡ ಕುಸಿತ ಸಂಪೂರ್ಣ ಕೊಚ್ಚಿ ಹೋದ ಬಿಸ್ಲೆ ಘಾಟ್ ರಸ್ತೆ
ಮಂಗಳೂರು ಆಗಸ್ಟ್ 19: ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿದ ಮಹಾಮಳೆ ಮಾಡಿದ ಅವಾಂತರಗಳು ದಿನದಿಂದ ದಿನಕ್ಕೆ ಬಳಕಿಗೆ ಬರುತ್ತಿದ್ದು, ಈ ನಡುವೆ ಗುಡ್ಡ ಕುಸಿತದಿಂದ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿ ಸಂಪೂರ್ಣ ಕೊಚ್ಚಿ ಹೋಗಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಬಳಿಕ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿಗೂ ಸಂಕಷ್ಟ ಎದುರಾಗಿದ್ದು. ಬಿಸ್ಲೆ ಘಾಟ್ ಮೇಲೆ ಕೂಡ ಗುಡ್ಡ ಕುಸಿತ ಉಂಟಾಗಿದೆ. ಭಾರೀ ಮಳೆಯಿಂದ ಬಿಸ್ಲೆ ಘಾಟಿ ಮೇಲಿಂದ ಹರಿದು ಬಂದ ನೀರಿನ ರಭಸಕ್ಕೆ ನೂರಾರು ಬೃಹತ್ ಮರಗಳು ಕೊಚ್ಚಿ ಕೊಂಡು ಹೋಗಿದೆ.
ಬಿಸ್ಲೆ ಘಾಟ್ ನ ಬಾಗಿಮಲೆಬೆಟ್ಟ ಅರಣ್ಯದಿಂದ ನೂರಾರು ಬೃಹತ್ ಮರಗಳು ಕೊಚ್ಚಿಕೊಂಡು ಬಂದು ತರಗೆಲೆಗಳಂತೆ ಬಂದು ರಸ್ತೆಗೆ ಬಂದು ಬಿದ್ದಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ನಾಶವಾಗಿದೆ. ಇತ್ತೀಚೆಗಷ್ಟೇ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಅತಿವೃಷ್ಟಿಯಿಂದ ಸಂಭವಿಸಿದ ಜಲಪ್ರಳಯಕ್ಕೆ ಬಿಸ್ಲೆ ಘಾಟ್ ರಸ್ತೆ ಸಂಪೂರ್ಣ ನಾಶ ವಾಗಿದೆ. ಸುಬ್ರಹ್ಮಣ್ಯ ದಿಂದ ಸಕಲೇಶಪುರ ಸಂಪರ್ಕಿಸುವ ಬಿಸ್ಲೆ ಘಾಟ್ ರಸ್ತೆ ಇದಾಗಿತ್ತು.
ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಳ ದಲ್ಲಿ ಸಂಭವಿಸಿದ ಗುಡ್ಡಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಇಂದೂ ಕೂಡ ಮುಂದುವರೆದಿದೆ. ದುರಂತದಲ್ಲಿ ಮಣ್ಣಿನಡಿಗೆ ಸಿಲುಕಿರುವವರ ಶೋಧ ಕಾರ್ಯವನ್ನು ಎನ್ ಡಿ ಆರ್ ಎಫ್ ತಂಡ ಮುಂದುವರೆಸಿದೆ.