Connect with us

    DAKSHINA KANNADA

    ಬಡ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚಕ್ಕಾಗಿ ರೂ. 1 ಲಕ್ಷ ನೀಡಿದ ಬಿರುವೆರ್ ಕುಡ್ಲ..!

    ಮಂಗಳೂರು : ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್ ,ಬಿರುವೆರ್ ಕುಡ್ಲದ ಯುವಕರ ಸಮೂಹವು ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ ಮತ ವನ್ನು ನೋಡದೆ ಬಡ ವರ್ಗಕ್ಕೆ ಆರ್ಥಕ ನೆರವು ಹಾಗೂ ಅರ್ಹ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತಿರುವ ಪುಣ್ಯದ ಕೆಲಸವನ್ನು ಮಾಡುತ್ತಾ ಬರುತ್ತಿದ್ದು ಶ್ಲಾಘನೀಯ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ನುಡಿದರು.

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳವಾರ ಫ್ರೆಂಡ್ಸ್ ಬಳ್ಳಾಳ್ ಭಾಗ್ ಬಿರುವೆರ್ ಕುಡ್ಲ ಸಂಸ್ಥೆಯು ಮಣ್ಣಗುಡ್ಡೆಯ ಕುಟುಂಬವೊಂದಕ್ಕೆ ಚಿಕಿತ್ಸೆಯ ವೆಚ್ಚಕ್ಕಾಗಿ ಒಂದು ಲಕ್ಷ ರೂ ಹಸ್ತಾಂತರಿಸಿ ಮಾತನಾಡಿದರು.

    ಈ ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದ ಸುಮಾರು 10 ಕೋ.ರೂಗಳಷ್ಟು ನಿಧಿಯನ್ನು ಅಶಕ್ತರ ಚಿಕಿತ್ಸೆಗೆ, ಶಿಕ್ಷಣಕ್ಕೆ, ವಿವಿಧ ಸವಲತ್ತು ವಿತರಣೆಗೆ ನೀಡಿದೆ.ಉಚಿತ
    ಆಂಬುಲೆನ್ಸ್ ಸೇವೆ,ಕೊರೊನಾ ಸಂದರ್ಭ ನೆರವು ಹಾಗೂ ಇದೀಗ 9ನೇ ಮನೆ ನಿರ್ಮಾಣ ಮಾಡಿ ಬಡ ವರ್ಗಕ್ಕೆ ಶೀಘ್ರ ಹಸ್ತಾಂತರ ಮಾಡಲಿದೆ.ಇದೆಲ್ಲಾ ಇತರ ಸಂಘಟನೆಗಳಿಗೆ ಮಾದರಿ ಎಂದರು.

    ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ,ಸಂದೇಶದಂತೆ ಜಾತ್ಯಾತೀತ ನೆಲೆಯಲ್ಲಿ ಹೀಗೆ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಾ ಬರುತ್ತಿದ್ದೇವೆ .ದುಬಾಯಿಯ ನಮ್ಮ ಹಿತೈಷಿಗಳು ,ಯುವಕರು ತಾವು ದುಡಿದ ಹಣದಲ್ಲಿ ಒಂದಿಷ್ಟು ಮೀಸಲಿಟ್ಟು ನೆರವು ಕೊಡುತ್ತಾ ಬರುತ್ತಿದ್ದಾರೆ.ಮುಂಬೈನ ವೆಂಕಟೇಶ್ ಭಂಡಾರಿ ಅವರು ಆರ್ಥಕ ನೆರವು ನೀಡುತ್ತಾ ಬರುತ್ತಿದ್ದಾರೆ.
    ನಾವುಪಕ್ಷ ರಹಿತವಾಗಿ ,ಜಾತ್ಯಾತೀತವಾಗಿ ಎಲ್ಲಾ ಬಡ ಕುಟುಂಬವನ್ನು ಗುರುತಿಸಿ ಆರ್ಥಿಕ ಸಹಾಯ ಮಾಡಿದ್ದೇವೆ.
    ದಾನಿಗಳು ,ರಾಜಕೀಯ ನಾಯಕರು ನಮ್ಮಈ ಕೆಲಸಕ್ಕೆ ಸಂಪೂರ್ಣ ಬೆಂಬಲ,ಪ್ರೋತ್ಸಾಹ ನೀಡಬೇಕು ಎಂದು ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ಹೇಳಿದರು.

    ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್ ಮಾತನಾಡಿ, ಯಾವುದೇ ಜಾತಿ ಮತ ನೋಡದೆ ಬಿರುವೆರ್ ಕುಡ್ಲ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡುತ್ತಾ ಬರುತ್ತಿರುವುದನ್ನು ಗಮನಿಸಿದ್ದೇನೆ.ಇಂತಹ ಸಂಘಟನೆಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು.ಬಡವರ್ಗಕ್ಕೆ ನೆರವು ಸಿಗುವಂತಾಗಬೇಕೆಂದರು.

    ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಧಾಕೃಷ್ಣ , ಬಿರುವೆರ್ ಕುಡ್ಲದ ಅಧ್ಯಕ್ಷ ರಾಕೇಶ್ ಪೂಜಾರಿ ,ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ರಾಕೇಶ್, ಲತೀಶ್ ಪೂಜಾರಿ ಬಳ್ಳಾಲ್ಬಾಗ್, ಧನರಾಜ್ ಪೂಜಾರಿ ಚಿಲಿಂಬಿ ,ಮನೋಜ್ ಶೆಟ್ಟಿ ಚಿಲಿಂಬಿ, ದಾಮೋದರ ಆಚಾರ್ಯ ಕಾವೂರು ,ಜಿತೇಶ್
    ಜೈನ್ ,ಅಮಿತ್ ಊರ್ವ ಸ್ಟೋರ್ ,ದರ್ಶನ್ ಜೈನ್, ರಾಮ್ ಎಕ್ಕೂರು, ರೆನಿತ್ ರಾಜ್, ಲೋಹಿತ್ ಗಟ್ಟಿ, ಗೌತಮ್ ಬೋಳೂರು, ರಜತ್ ಕುಲಾಲ್ ಚಿಲಿಂಬಿ, ದೀಕ್ಷಿತ ಅತ್ತಾವರ, ಗುರು ಚರಣ್ ಕುಲಾಲ್,
    ಪ್ರವೀಣ್ ಜೆಪ್ಪು,ದಿನಿಲ್ ಬಳ್ಳಾಲ್ ಬಾಗ್, ಕಿರಣ್ ಬಂಟ್ವಾಳ ,ದೀಕ್ಷ ಪ್ರಕಾಶ್ ,ನಿತ್ಯ ಅಶೋಕ್ ನಗರ,ರಮ್ಯ,ಗೀತಾ ಸುಜಾತಾ ಮತ್ತಿತರ ರು ಉಪಸ್ಥಿತಿ ತರಿದ್ದರು

    Share Information
    Advertisement
    Click to comment

    You must be logged in to post a comment Login

    Leave a Reply