KARNATAKA
ಎಲೆಕ್ಟ್ರಾನಿಕ್ ಸಿಟಿ ಪ್ಲೈಓವರ್ ಮೇಲೆ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಚಲಾವಣೆ

ಬೆಂಗಳೂರು ಜುಲೈ 21: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಯುವಕನೊಬ್ಬ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಚಲಾಯಿಸಿದ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಾಕ್ ಡೌನ್ ನಡುವೆ ಈತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ತನ್ನ ಯಮಹಾ 1000 ಸಿಸಿ ಬೈಕ್ ನಲ್ಲಿ 300 ಕಿಲೋ ಮೀಟರ್ ವೇಗದಲ್ಲಿ ಬೈಕ ಚಲಾಯಿಸಿದ್ದಾನೆ. ಅಲ್ಲದೆ ತನ್ನ ತನ್ನ ಹೆಡ್ ಕ್ಯಾಮರಾದಿಂದ ತಾನು ವೇಗವಾಗಿ ಬೈಕ್ ಚಲಾಯಿಸುತ್ತಿದ್ದದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದ ಈ ಯುವಕ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿತ್ತು. ಈ ವಿಚಾರ ಬೆಂಗಳೂರು ಟ್ರಾಫಿಕ್ ಪೊಲೀಸರ ಗಮನಕ್ಕೂ ಬಂದಿದ್ದು, ಇದೀಗ ಯುವಕನನ್ನು ಗುರುತಿಸಿ ಆತ ಚಲಾಯಿಸಿದ್ದ ಯಮಹಾ 1000 ಸಿಸಿ ಬೈಕನ್ನು ವಶಕ್ಕೆ ಪಡೆಯಲಾಗಿದೆ.

https://youtu.be/Nv9AAGFWjSQ