LATEST NEWS
ಕೆಎಸ್ ಆರ್ ಟಿಸಿ ಬಸ್ ಗಾಜನ್ನು ಹೆಲ್ಮೆಟ್ ನಿಂದ ಪುಡಿ ಮಾಡಿದ ಬೈಕ್ ಸವಾರ
ಮಂಗಳೂರು ಡಿಸೆಂಬರ್ 02: ಬೈಕ್ ಸವಾರನೊಬ್ಬ ಹೆಲ್ಮೆಟ್ ನಿಂದ ಕೆಎಸ್ ಆರ್ ಟಿಸಿಯ ಅಶ್ವಮೇಧ ಬಸ್ ನ ಗಾಜನ್ನು ಪುಡಿ ಮಾಡಿದ ಘಟನೆ ಅಳಪೆ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ಗೆ ಅಳಪೆ ಬಳಿ ದ್ವಿಚಕ್ರ ವಾಹನ ಅಡ್ಡ ಬಂದಿದ್ದಾನೆ. ಈ ವೇಳೆ ಕೆಎಸ್ ಆರ್ ಟಿಸಿ ಬಸ್ ಚಾಲಕ ಇದನ್ನು ಪ್ರಶ್ನಿಸಿದ ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ದ್ವಿಚಕ್ರ ವಾಹನ ಸವಾರ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಬಸ್ ಚಾಲಕ ಅರುಣ್ ಎಂಬವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.