DAKSHINA KANNADA
ರಿಕ್ಷಾ ಬೈಕ್ ನಡುವೆ ಅಪಘಾತ – ಐಟಿಐ ವಿಧ್ಯಾರ್ಥಿ ಸಾವು…!!

ಸುಳ್ಯ ಸೆಪ್ಟೆಂಬರ್ 26: ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಐಟಿಐ ವಿಧ್ಯಾರ್ಥಿ ಸಾವನಪ್ಪಿರುವ ಘಟನೆ ಸುಳ್ಯದ ಪರಿವಾರಕಾನ ಬಳಿ ನಡೆದಿದೆ. ಮೃತ ವಿಧ್ಯಾರ್ಥಿಯನ್ನು ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ಪ್ರತೀಕ್ (19) ಎಂದು ಗುರುತಿಸಲಾಗಿದೆ.
ಈತ ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡತ್ತಿರುವ ತೇಜಸ್ ಎಂಬ ಯುವಕನ ಜೊತೆ ಇಂದು ಬೆಳಗ್ಗೆ ಕಲ್ಲುಗುಂಡಿಯಿಂದ ಬೈಕ್‌ನಲ್ಲಿ ಪ್ರತೀಕ್ ಸುಳ್ಯದ ಕಡೆಗೆ ಬರುತ್ತಿದ್ದರು. ಈ ವೇಳೆ ಪರಿವಾರಕಾನ ತಿರುವಿನಲ್ಲಿ ಆಟೋರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರೂ ಗಂಭೀರ ಗಾಯಗೊಂಡಿದ್ದು, ಕೂಡಲೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗಾಗಲೇ ಪ್ರತೀಕ್ ಮೃತಪಟ್ಟರು. ಗಂಭೀರ ಗಾಯಗೊಂಡಿರುವ ತೇಜಸ್‌ರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
