Connect with us

    BELTHANGADI

    ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ

    ಬೆಳ್ತಂಗಡಿ ಅಕ್ಟೋಬರ್ 16: ಬೈಕ್ ಗಳ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಾಲಿನ ನೆಕ್ಕಲದಲ್ಲಿ ನಡೆದಿದೆ‌.


    ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನೆಕ್ಕಿಲ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್ ಮತ್ತು ಕೃಪಾ ಮನೆಯಿಂದ ಬೈಕ್ ನಲ್ಲಿ ಬೆಳಾಲು ದೇವಸ್ಥಾನಕ್ಕೆ ಹೋಗುತ್ತಿದ್ದರು. ಬೆಳಾಲಿನಿಂದ ಬೆಳ್ತಂಗಡಿ ಕಡೆಗೆ ಫೈರೋಝ್ ಬರುತ್ತಿದ್ದಾಗ ಅಪಘಾತ ನಡೆದಿದೆ.‌ ಅಪಘಾತದಲ್ಲಿ ಕೊಯ್ಯೂರು ಗ್ರಾಮದ ನಿವಾಸಿ ಕಾರ್ತಿಕ್ ಮತ್ತು ಕೃಪಾ ಅವರು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ. ಮತ್ತೊಂದು ಬೈಕ್ ಸವಾರ ಫೈರೋಝ್‌ ಎಂಬವರ ಕಾಲಿಗೆ ಗಂಭೀರ ಗಾಯವಾಗಿದ್ದು, ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply