National
ನೇಪಾಳ ಗಡಿ ಮೂಲಕ ಭಾರತ ಪ್ರವೇಶಕ್ಕೆ ಪಾಕಿಸ್ತಾನದ ಉಗ್ರರ ಸಂಚು
ಬಿಹಾರ: ಕಾಶ್ಮೀರದಲ್ಲಿ ಭಾರತೀಯ ಸೇನೆಯ ದಾಳಿಗೆ ತತ್ತರಿಸಿರುವ ಉಗ್ರರು ಈಗ ಭಾರತ ಪ್ರವೇಶಕ್ಕೆ ನೇಪಾಳ ವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದು, ಪಾಕಿಸ್ತಾನದ ಗಡಿಯ ಬದಲು ನೇಪಾಳದ ಮೂಲಕ ಭಾರತದ ಒಳಕ್ಕೆ ನುಸುಳಲು ಜೈಷೆ ಮೊಹಮ್ಮದ್ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಜೈಷೆ ಮೊಹಮ್ಮದ್ ಮತ್ತು ತಾಲಿಬಾನ್ ಸಂಘಟನೆಯ ಆತ್ಮಾಹುತಿ ದಳದ 20ರಿಂದ 25 ಉಗ್ರರು ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮೂಲಕ ಮತ್ತು 6 ರಿಂದ 8 ಉಗ್ರರ ಗುಂಪು ನೇಪಾಳ ಗಡಿ ಮೂಲಕ ಪ್ರವೇಶಿಸುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ ಹೊಂದಿಕೊಂಡ ಬಿಹಾರದ ಗಡಿ ಭಾಗದಲ್ಲಿ ಪೊಲೀಸ್ ವಿಶೇಷ ದಳ ಕಟ್ಟೆಚ್ಚರ ವಹಿಸಿದೆ. ಉತ್ತರಾಖಂಡದ ದುರ್ಗಮ ಗಡಿ ತಾಣಗಳ ಮೇಲೂ ನಿಗಾ ಇರಿಸಲಾಗಿದೆ. ಭಾರತದ ಯೋಧರು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರು ಹಾಗೂ ಅವರಿಗೆ ಸಹಾಯ ಮಾಡುವ ಬೆಂಬಲಿಗರನ್ನ ಟಾರ್ಗೆಟ್ ಮಾಡುತ್ತಿದೆ. ಅಲ್ಲದೇ ಉಗ್ರರಿಗೆ ಸರಿಯಾದ ಗತಿ ಕಾಣಿಸುತ್ತಿದೆ.
ಈ ಹಿನ್ನೆಲೆ ಜಮ್ಮು ಕಾಶ್ಮೀರದ ಮೂಲಕ ಭಾರತಕ್ಕೆ ನುಗ್ಗಲು ಉಗ್ರರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಹತಾಶರಾಗಿರುವ ಉಗ್ರರು ನೇಪಾಳ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿದೆ. ಜಮ್ಮು ಕಾಶ್ಮೀರಕ್ಕೆ ಹೋಲಿಸಿದರೆ ನೇಪಾಳ ಗಡಿ ಭಾಗ ಕೊಂಚ ಸುಲಭ ಎನ್ನುವ ಕಾರಣಕ್ಕೆ ಈ ಮಾರ್ಗ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.