National
ಮುಂಬೈ ತಾಜ್ ಹೋಟೆಲ್ ಗೆ ಲಷ್ಕರ್-ಎ-ತೊಯಬಾ ಉಗ್ರ ಸಂಘಟನೆಯಿಂದ ಬಾಂಬ್ ಬೆದರಿಕೆ ಕರೆ
ಮುಂಬೈ ಜೂನ್ 30: ತಾಜ್ ಹೋಟೆಲ್ ಮತ್ತು ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ಗೆ ಸೋಮವಾರ ಮಧ್ಯರಾತ್ರಿ ಲಷ್ಕರ್-ಎ-ತೊಯಬಾ ಉಗ್ರ ಸಂಘಟನೆಯ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಬೆದರಿಕೆಯೊಡ್ಡಿದ್ದಾನೆ ಎಂದು ವರದಿಯಾಗಿದೆ.
ಈ ಹಿನ್ನಲೆ ಭದ್ರತಾ ಸಿಬ್ಬಂದಿ ಹೋಟೆಲ್ ಸುತ್ತಮುತ್ತ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಹೋಟೆಲ್ ಆವರಣವನ್ನು ಶೋಧಿಸಲಾಗುತ್ತಿದೆ.ಮುಂಜಾಗ್ರತಾ ಕ್ರಮವಾಗಿ ತಾಜ್ ಹೋಟೆಲ್ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಪಾಕಿಸ್ತಾನದಿಂದ ಕರೆ ಮಾಡಿರುವ ವ್ಯಕ್ತಿ ತನ್ನನ್ನು ಲಷ್ಕರ್ ಇ- ತೊಯ್ಹಾ ಸಂಘಟನೆಯ ಸದಸ್ಯ ಎಂದು ಪರಿಚಯಿಸಿಕೊಂಡಿದ್ದಾನೆ. ಸೋಮವಾರ ತಡರಾತ್ರಿ 12-30ಕ್ಕೆ ಮೊದಲ ಕರೆ ಬಂದಿದ್ದು, 2008 ನವೆಂಬರ್ ನಲ್ಲಿ ನಡೆದಂತೆ ಲಷ್ಕರ್ -ಇ- ತೊಯ್ಬಾ ಉಗ್ರರಿಂದ ಹೋಟೆಲ್ ಮೇಲೆ ದಾಳಿ ನಡೆಸಲಾಗುವುದು ಎಂದು ಹೇಳಿದ್ದಾನೆ.
ಬಾಂದ್ರಾದಲ್ಲಿನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ಸಿಬ್ಬಂದಿ ಎರಡನೇ ಬಾರಿಗೆ ಕರೆ ಸ್ವೀಕರಿಸಿದಾಗ, ಎರಡು ಹೋಟೆಲ್ ಗಳಿಗೆ ಬಾಂಬ್ ಹಾಕಲಾಗುವುದು ಎಂದು ಬೆದರಿಸಿದ್ದಾನೆ. ಎರಡು ಕರೆಗಳು ಒಂದೇ ನಂಬರ್ ನಿಂದ ಬಂದಿವೆ.
Facebook Comments
You may like
ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಸ್ಪೋಟ ಪತ್ತೆ
ಕೇರಳ ಮತ್ತು ಮುಂಬೈಯಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ : ಸಂಸದೆ ಶೋಭಾ
ರಿಪಬ್ಲಿಕ್ ಭಾರತ್ ಚಾನೆಲ್ ನ ನಿರೂಪಕ ಕೊರೊನಾಗೆ ಬಲಿ
ಮುಂಬೈ ಜೀವನಾಡಿ ಲೋಕಲ್ ಟ್ರೈನ್ ಗೆ ಶಿರಬಾಗಿ ನಮಿಸಿದ ಪ್ರಯಾಣಿಕ
ಸಾಮಾಜಿಕ ಜಾಲತಾಣದಲ್ಲಿ ಪರಿಚಯ 13 ವರ್ಷದ ಬಾಲಕಿಯನ್ನು ಮುಂಬೈಗೆ ಕರೆಸಿ ಸಾಮೂಹಿಕ ಅತ್ಯಾಚಾರ
ದಿಲ್ಲಿ ಇಸ್ರೇಲ್ ರಾಯಬಾರಿ ಕಚೇರಿ ಬಳಿ ಬಾಂಬ್ ಸ್ಪೋಟ – ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ
You must be logged in to post a comment Login